ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :70ನೇ ಅಖಿಲಭಾರತ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಕಾರ್ಯವೈಖರಿ ಗುರುತಿಸಿ ಸಹಕಾರಿ ಸಚಿವರಾದ ಕೆ. ಎನ್ ರಾಜಣ್ಣ ರವರು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದಲ್ಲಿ “ಉತ್ತಮ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ” ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಿ.ಮಂಜುನಾಥ್ ಕುಂದರ್ ಚಾತ್ರಬೆಟ್ಟು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ್ ಕಾಂಚನ್, ಉಪಾಧ್ಯಕ್ಷ ರಾಜು ತೋಟದಬೆಟ್ಟು, ನಿರ್ದೇಶಕರಾದ ಅಶೋಕ್ ಪೂಜಾರಿ, ಶ್ರೀನಿವಾಸ್ ಮರಕಾಲ, ಬಿ.ಶಿವರಾಮ ಅಮೀನ್, ಬಿ.ಶೇಖರ್ ಮೊಗವೀರ, ಅಣ್ಣಯ್ಯ ಪುತ್ರನ್, ಜಾನಕಿ, ಅನೂಷಾ, ಶಾಖಾ ವ್ಯವಸ್ಥಾಪಕರಾದ ಗಣೇಶ್ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.











