ಕುಂದಾಪುರ :ಇಂದಿರಾ ಕ್ಯಾಂಟೀನ್ನಲ್ಲಿ ಇಂದಿರಾಗಾಂಧಿ ಜನ್ಮ ದಿನಾಚರಣೆ

0
649

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಬ್ಯಾಂಕುಗಳ ರಾಷ್ಟ್ರೀಕರಣ, ಭೂ ಸುಧಾರಣೆ ಮತ್ತು ಗರೀಬಿ ಹಟಾವೋ ಮೂಲಕ ದೇಶವನ್ನು ಅಭಿವೃದ್ಧಿಯತ್ತ ತಂದ ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ. ಅವರ ದೂರ ದೃಷ್ಟಿಯ ಪ್ರತಿಫಲವಾಗಿ ಇಂದು ಈ ದೇಶ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಅಗ್ರಗಣ್ಯ ಎನಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹೇಳಿದರು.

ಭಾನುವಾರ ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಉಪಹಾರ ನೀಡಿ ಮಾತನಾಡಿದರು.

Click Here

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕಾಸ್ಟೋ ಪ್ರಾಸ್ತಾವಿಕ ಮಾತನಾಡಿ , ದೇಶದ ಕಟ್ಟಕಡೆಯ ಜನರನ್ನು ಸಮಾನತೆಯ ಮೂಲಕ ಮುಖ್ಯ ವಾಹಿನಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ . ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಕಾರ್ಯಕ್ರಮಗಳು ಅದರ ಒಂದು ಮುಂದುವರಿದ ಭಾಗ ಎಂದು ಹೇಳಿದರು.

ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ ,ಪುರಸಭೆ ಸದಸ್ಯರಾದ ಶ್ರೀಧರ್ ಶೇರಿಗಾರ , ಅಬ್ಬು ಮಹಮ್ಮದ್ ,ಪ್ರಭಾವತಿ ಶೆಟ್ಟಿ , ಪಂಚಾಯತ್ ಸದಸ್ಯರಾದ ವಿಜಯಧರ್ ಕೆ ವಿ , ಜಿಲ್ಲಾ ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ ಹಿರಿಯರಾದ ಗಂಗಾಧರ ಶೆಟ್ಟಿ ,ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರಮೀನ್ ಅಶ್ವತ್ ಕುಮಾರ್ , ಮುನಾಫ ಕೋಡಿ ,ಐ ಟಿ ಸೇಲ್ ನ ಚಂದ್ರಶೇಖರ್ ಶೆಟ್ಟಿ ,ನ್ಯಾಯವಾದಿ ಸಚ್ಚಿದಾನಂದ್ ಎಂ ಎಲ್ ,ಆಶಾ ಕರ್ವಾಲ್ಲೊ , ಕುಮಾರ ಖಾರ್ವಿ, ಜ್ಯೋತಿ ನಾಯ್ಕ್ ,ಅಶೋಕ್ ಸುವರ್ಣ, ಶೋಭಾ ಸಚ್ಚಿದಾನಂದ , ಕೇಶವ ಭಟ್ ,ಅಭಿಜಿತ್ ಪೂಜಾರಿ , ವಿಠ್ಠಲ್ ಕಾಂಚನ್ , ಕೆ ಸುರೇಶ್ ,ವಿವೇಕಾನಂದ , ವೇಣುಗೋಪಾಲ್ , ಎಡಾಲ್ಫ್ ಡಿಕೋಸ್ತಾ, ಮಧುಕರ ಬಡೆಕಟ್ಟು ,ಸುನಿಲ್ ಪೂಜಾರಿ , ಆನಂದ ಪೂಜಾರಿ ,ಎಂ ಉದಯಕುಮಾರ್ , ರಮೇಶ , ಸತೀಶ, ಸದಾನಂದ ಖಾರ್ವಿ, ದಿನೇಶ ಬೆಟ್ಟ ಇನ್ನಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here