ಕುಂದಾಪುರ ಮಿರರ್ ಸುದ್ದಿ…
ಕೋಟ: ಭಾಷೆ ಎಂಬುವುದು ವ್ಯವಹಾರಕ್ಕೆ ಸೀಮಿತಗೊಳ್ಳದೆ ಮನೆ ಮನಗಳಲ್ಲಿ ಮೊಳಗಬೇಕು ಆಗ ಮಾತ್ರ ಮಾತೃಭಾಷೆ ಉಳಿಸಿ ಬೆಳಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಹೇಳಿದರು.
ಶನಿವಾರ ಸಾಲಿಗ್ರಾಮದ ಚಿತ್ರಪಾಡಿ ಕಾರ್ತಟ್ಟು ಅಘೋರೇಶ್ವರ ಕಲಾರಂಗ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಂಭ್ರಮ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ ಭಾಷೆ ಉಳಿಸುವ ಹೊಣೆಗಾರಿಗೆ ಸಂಘ ಸಂಸ್ಥೆಗಳಿಗೆ ಸಿಮಿತವಲ್ಲ ಬದಲಾಗಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಪಸರಿಸಬೇಕು, ಪ್ರಸ್ತುತ ಕಾಲಘಟ್ಟದಲ್ಲಿ ಆಂಗ್ಲ ಶಿಕ್ಷಣದ ವ್ಯಾಮೂಹಕ್ಕೆ ಬಲಿಯಾಗುತ್ತಿದ್ದಾರೆ ಅದೊಂದು ಕಾರ್ಖಾನೆಯಾಗಿ ಪರಿವರ್ತನೆಗೊಂಡಿರುವುದು ದುರದೃಷ್ಟಕರ, ತಾಯಂದಿರರು ಮಕ್ಕಳಿಗೆ ಮೊದಲು ನೈಜ ಸಂಸ್ಕಾರ ಕಲಿಸುವ ಕಾರ್ಯ ಮಾಡಲಿ ಇದರಿಂದ ಬದುಕಿನ ನೈಜ ಪಯಣ ಸಾಗಲಿದೆ. ಮೊಬೈಲ್ ವ್ಯಾಮೂಹದಿಂದ ದೂರವಿರಿಸಲು ಕರೆಇತ್ತರಲ್ಲದೆ ಗ್ರಾಮ ಅಭಿವೃದ್ಧಿಯಾದರೆ ದೇಶ ಉದ್ಧಾರವಾದಂದೆ ಎಂದರು.
ಇದೇ ವೇಳೆ ಅಘೋರೇಶ್ವರ ಕಲಾರಂಗದ ರಾಜ್ಯೋತ್ಸವ ಪ್ರಶಸ್ತಿಯನ್ನು ಶಿಕ್ಷಕ ,ವಾಗ್ಮಿ ಸತೀಶ್ಚಂದ್ರ ಶೆಟ್ಟಿಯವರಿಗೆ ಪ್ರದಾನಿಸಲಾಯಿತು.
ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಅಘೋರೇಶ್ವರ ದೇಗುಲದ ಅಧ್ಯಕ್ಷ ಚಂದ್ರಶೇಖರ ಕಾರಂತ್ ಉದ್ಘಾಟಿಸಿದರು.
ಮುಖ್ಯ ಅಭ್ಯಾಗತರಾಗಿ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ,ನಿವೃತ್ತ ಕಾರ್ಯವಾಹಕ ಇಂಜಿನಿಯರ್ ಮಂಜುನಾಥ ನಾಯರಿ, ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಧ್ಯಕ್ಷ ಗಿರೀಶ್ ಮಯ್ಯ,ಜಯಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಇದ್ದರು. ಅಘೋರೇಶ್ವರ ಕಲಾರಂಗದ ಅಧ್ಯಕ್ಷ ಉಮೇಶ್ ನಾಯರಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸೂರಜ್ ಹಾವಂಜೆ ನಿರೂಪಿಸಿದರು. ಕಾರ್ಯದರ್ಶಿ ನಾಗರಾಜ್ ಐತಾಳ್ ವಂದಿಸಿದರು. ಸದಸ್ಯರಾದ ಸಂದೀಪ್, ರವಿ ಬನ್ನಾಡಿ ಸಹಕರಿಸಿದರು.











