ಕುಂದಾಪುರ ಮಿರರ್ ಸುದ್ದಿ…
ಕೋಟ: ಇತ್ತೀಚೆಗೆ ಕೋಟ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ ಬಾಬು ಶಿವ ಪೂಜಾರಿ ದಂಪತಿಗಳನ್ನು ಶ್ರೀ ಕ್ಷೇತ್ರ ಸಾಸ್ತಾನ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಹಾಗೂ ಗೋಳಿಗರಡಿ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವಿಸಿದ ದಂಪತಿಗಳ ಅಮೃತ ಹಸ್ತದಲ್ಲಿ ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘದ ನೂತನ ಕಟ್ಟಡ ನೀಲ ನಕ್ಷೆಯ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ, ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, ಪ್ರದಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಕ್ಷೇತ್ರದ ಪಾತ್ರಿಗಳಾದ ಶಂಕರ್ ಪೂಜಾರಿ, ಗೋಳಿ ಗರಡಿ ಮೇಳದ ವ್ಯವಸ್ಥಾಪಕರಾದ ಜಿ.ವಿಠ್ಠಲ್ ಪೂಜಾರಿ, ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರತ್ನ ಜೆ ರಾಜ್, ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣೇಶ್ ಪೂಜಾರಿ ಸ್ವಾಗತಿಸಿ ವಂದಿಸಿದರು.











