ಸಾಲಿಗ್ರಾಮ – ಕೋಟ ಶಿವರಾಮ ಕಾರಂತರ26ನೇ ಸ್ಮೃತಿ ದಿನಾಚರಣೆ

0
224

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟ ಶಿವರಾಮ ಕಾರಂತ ರಿಸರ್ಚ್ ಮತ್ತು ಸ್ಟಡಿ ಸೆಂಟರ್ ಟ್ರಸ್ಟ್ , ಮಾನಸ, ಸಾಲಿಗ್ರಾಮ ಹಾಗೂ ಗೆಳೆಯರ ಬಳಗ ಕಾರ್ಕಡ ಇವರ ಸಹಯೋಗದೋಂದಿಗೆ ಡಾ ಶಿವರಾಮ ಕಾರಂತರ 26ನೇ ಸ್ಮೃತಿ ದಿನಾಚರಣೆ, ಕಾರಂತ ರಂಗ ರಥದಲ್ಲಿ ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಿ.ಎಂ ಗುರುರಾಜ್ ವಹಿಸಿದ್ದರು.

Click Here

ಮುಖ್ಯಅತಿಥಿಯಾಗಿ ಕುಂದಾಪುರದ ಹಿರಿಯ ನ್ಯಾಯವಾದಿ , ಸಾಹಿತಿ ಎ.ಎಸ್.ಎನ್ ಹೆಬ್ಬಾರ ಮಾತಾನಾಡಿ ಶಕಪುರುಷ ಕಾರಂತರ ಜೀವನೋತ್ಸಾಹ ಅನನ್ಯ ಅವರ ಜೀವನದ ಮಜಲುಗಳು ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಅಂತಹ ಮಹಾನ್ ಸಾಹಿತಿಯನ್ನು ಪಡೆದ ನಾವುಗಳೇ ಧನ್ಯರು ಎಂದು ಅಭಿಪ್ರಾಯಪಟ್ಟರಲ್ಲದೆ ಶಿವರಾಮ ಕಾರಂತರಂತಹವರು ಶಕಪುರುಷರು. ಅವರು ಧೀರೋದಾತ್ತರು. ಅನ್ಯಾಯದ ವಿರುದ್ಧ ಕೊನೆ ತನಕ ಹೋರಾಟ ನಡೆಸಿದವರು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಜೀವನೋತ್ಸಾಹ ಯುವಜನಕ್ಕೆ ಆದರ್ಶ ಮಂಗಳೂರು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣವನ್ನು ಉಕ್ತಲೇಖನದಲ್ಲಿ ಬರೆಸಿದ್ದರು. ಕಂಪ್ಯೂಟರ್ ಕಲಿತು, ವರ್ಣಮಯ ಪಶು, ಪಕ್ಷಿಗಳ ಪುಸ್ತಕ ಬರೆಯಬೇಕೆಂದಿದ್ದರು. ಬದುಕಿನುದ್ದಕ್ಕೂ ನುಡಿದಂತೆ ನಡೆದವರು. ಆರ್ತರಿಗೆ, ಕಷ್ಟದಲ್ಲಿದ್ದವರಿಗೆ ಪ್ರತಿ ತಿಂಗಳೂ ಆರ್ಥಿಕ ನೆರವು ಕಳುಹಿಸುತ್ತಿದ್ದವರು. ನಾಡು ಕಂಡ ಅದ್ಭುತ ವ್ಯಕ್ತಿತ್ವದ ಕಾರಂತರ ಜೀವನ, ಸಾಧನೆ ಅನುಕರಣೀಯ”ಎಂದರು.

ಸಮಾರಂಭದಲ್ಲಿ ಸಂಸ್ಥೆಯ ವಿಶ್ವಸ್ಥಮಂಡಳಿಯ ಕಾರ್ಯನಿರ್ವಾಹಕ ಗುಜ್ಜಾಡಿ ಪ್ರಭಾಕರ ನಾಯಕ್ ಕಾರಂತರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಕಾರಂತರ ವ್ಯಕ್ತಿತ್ವದ ಬಗ್ಗೆ ತಿಳಿಸಿದರು

ಟ್ರಸ್ಟ್‌ನ ಸಂದೀಪ್ ಶೆಟ್ಟಿ. ಎನ್. ವಿಶ್ವನಾಥ್ ಕಾಮತ್, ಕಾರ್ಯದರ್ಶಿ ನಾರಾಯಣ ಆಚಾರ್ಯ, ಬಳಗದ ಜಗದೀಶ ಆಚಾರ್ಯ, ಸೇವಾಸಂಗಮ ತೆಕ್ಕಟ್ಟೆಯ. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here