ಕುಂದಾಪುರ: ಬಸವ ವಸತಿ ಯೋಜನೆ ಅನುದಾನ ಬಿಡುಗಡೆಗೆ ಲಂಚದ ಬೇಡಿಕೆ – ಪಿಡಿಓ ಲೋಕಾಯುಕ್ತ ಬಲೆಗೆ

0
689

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬಸವ ವಸತಿ ಯೋಜನೆಯಲ್ಲಿ ಮಂಜೂರಾಗಿದ್ದ ಮನೆಯ ಅನುದಾನ ಬಿಡುಗಡೆಗೆ ಲಂಚದ ಬೇಡಿಕೆ ಇಟ್ಟ ಆರೋಪಿ ಪಿಡಿಓ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಎಂಬಲ್ಲಿ ನಡೆದಿದೆ.

Click Here

ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ಪಿ ಡಿ ಓ ಜಯಂತ್ ಎಂಬಾತ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಆರೋಪಿ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗೆಬೆಟ್ಟು ನಿವಾಸಿ ರಾಧಾ ಮರಕಾಲ್ತಿ ಎಂಬುವರ ಜಾಗದಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರಾಗಿದ್ದು ಅನುದಾನ ಬಿಡುಗಡೆಗೆ 10 ಸಾವಿರ ರೂಪಾಯಿ ಲಂಚ ನೀಡುವಂತೆ ಆರೋಪಿತ ಪಿಡಿಒ ಜಯಂತ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ರಾಧಾ ಮರಕಾಲ್ತಿಯವರ ಪುತ್ರಿ ಸುಜಾತ ಎಂಬುವರು ಉಡುಪಿ ಲೋಕಾಯುಕ್ತ ಇಲಾಖೆಗೆ ಲಿಖಿತ ದೂರು ನೀಡಿದ್ದರು. ದೂರನ್ನು ಆಧರಿಸಿದ ಲೋಕಾಯುಕ್ತ ಪೊಲೀಸರು ಮಂಗಳೂರು ಲೋಕಾಯುಕ್ತ ಅಧೀಕ್ಷಕ ಸಿ ಎ ಸೈಮನ್ ಅವರ ಮಾರ್ಗದರ್ಶನದಲ್ಲಿ ನವೆಂಬರ್ 12ರಂದು ಲಂಚದ ಹಣ ಹತ್ತು ಸಾವಿರ ರೂಪಾಯಿಗಳನ್ನು ಕುಂದಾಪುರ ತಾಲೂಕಿನ ತೆಕ್ಕಟ್ಟೆ ಜಂಕ್ಷನ್ ಬಳಿ ಆರೋಪಿ ಪಿಡಿಓ ಜಯಂತ್ ಅವರು ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರು ರೆಡ್ ಹದಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.

ಉಡುಪಿ ಲೋಕಾಯುಕ್ತ ಇಲಾಖೆ ನಿರೀಕ್ಷಕರಾದ ರಫೀಕ್ ಎಂ ಹಾಗೂ ಸಿಬ್ಬಂದಿಗಳಾದ ನಾಗೇಶ್ ಉಡುಪ, ರಾಘವೇಂದ್ರ, ನಾಗರಾಜ, ರೋಹಿತ್, ಮಲ್ಲಿಕಾ, ಸತೀಶ್ ಹಂದಾಡಿ, ಅಬ್ದುಲ್ ಜಲಾಲ್, ಪ್ರಸನ್ನ ದೇವಾಡಿಗ, ರಾಘವೇಂದ್ರ ಹೊಸ್ಕೋಟೆ, ಸತೀಶ್ ಆಚಾರ್ಯ, ಸೂರಜ್ ಅವರು ದಾಳಿಯಲ್ಲಿ ಭಾಗವಹಿಸಿದ್ದರು.

Click Here

LEAVE A REPLY

Please enter your comment!
Please enter your name here