ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮದಲ್ಲಿ ಕೂಟ ಸಮಾಜದ ಅಶಕ್ತರ ಸಹಾಯೋದ್ದೇಶದಿಂದ ಎರಡು ದಶಕಗಳಿಂದ ಕಾರ್ಯಾಚರಿಸುತ್ತಿರುವ ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಶನ್‍ನ ದ್ವೈವಾರ್ಷಿಕ ಸಮಾವೇಶವು ಕೂಟಬಂಧು ಭವನದಲ್ಲಿ ಭಾನುವಾರ ನಡೆಯಿತು.
ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಕೆ.ಎಸ್.ಕಾರಂತ ಉದ್ಘಾಟಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ಆನಂದರಾಮ ಮಧ್ಯಸ್ಥ ವಹಿಸಿದ್ದರು. ಬೃಹತ್ ಮೊತ್ತದ ದಾನಿಗಳಾದ ರಘುನಾಥ ಸೋಮಯಾಜಿ, ಕರ್ನಾಟಕ ಬ್ಯಾಂಕ್ ಮತ್ತು ಬೈಂದೂರು ದಿ.ಅಣ್ಣಪ್ಪ ಹೊಳ್ಳ ಕುಟುಂಬಸ್ಥರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಸಭೆಯಲ್ಲಿ ಕೂಟ ಮಹಾಜಗತ್ತಿನ ಪೂರ್ವಾಧ್ಯಕ್ಷ ಡಾ.ಕೆ.ಪಿ.ಹೊಳ್ಳ, ಪ್ರಸಕ್ತ ಅಧ್ಯಕ್ಷ ಸತೀಶ ಹಂದೆ, ಸ್ಥಾಪಕ ಟ್ರಸ್ಟಿ ನಾರಾಯಣ ಸೋಮಯಾಜಿ, ನಾಗರಾಜ ಶೃಂಗೇರಿ, ಬಂಟ್ವಾಳ ವಿಶ್ವನಾಥ ಸೋಮಯಾಜಿ, ಕೃಷ್ಣ ಕುಮಾರ ಸೋಮಯಾಜಿ , ಯಜ್ಞ ನಾರಾಯಣ ಕಮ್ಮಾಜೆ ,ವಿಜಯಲಕ್ಷ್ಮಿ ಹೊಳ್ಳ, ಕೂಟ ಮಹಾಜಗತ್ತು ಅಂಗಸಂಸ್ಥೆ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಸಮಾವೇಶದಲ್ಲಿ ದೇಶದಾದ್ಯಂತ ಪಸರಿಸಿರುವ ಕೂಟ ಜಗತ್ತಿನ 37 ಅಂಗಸಂಸ್ಥೆಯ ಪ್ರತಿನಿಧಿಗಳು, ದಾನಿಗಳು, ಫಲಾನುಭವಿಗಳು ಭಾಗವಹಿಸಿದರು. ಟ್ರಸ್ಟ್‌ನ ನಾಗರಾಜ ಶೃಂಗೇರಿ ಸ್ವಾಗತಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಎಂ.ರಾಘವೇಂದ್ರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಗೋಪಾಲಕೃಷ್ಣ ಹೇರ್ಳೆ ವಂದಿಸಿದರು.











