ಪಾಂಡೇಶ್ವರ ಶಾಲಾ 99ನೇ ವರ್ಷದ ವಾರ್ಷಿಕೋತ್ಸವ
ಕೋಟ: ಗ್ರಾಮೀಣ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಹಳೇ ವಿದ್ಯಾರ್ಥಿಗಳ ಹಾಗೂ ಶಾಲಾಭಿವೃದ್ಧಿ ಸಮಿತಿ ಪಾತ್ರ ಮಹತ್ತರವಾದದ್ದು ಈ ದಿಸೆಯಲ್ಲಿ ಇಲ್ಲಿನ ಹಳೇ ವಿದ್ಯಾರ್ಥಿಗಳ ಕಾರ್ಯತತ್ಪರತೆ ಶ್ಲಾಘನೀಯ ಎಂದು ಶಾಲಾ ಸಂಚಾಲಕ ರೇ.ಫಾ.ಸುನೀಲ್ ಡಿಸಿಲ್ವ ನುಡಿದರು.
ಭಾನುವಾರ ಶತಮಾನೋತ್ಸವ ಸಂಭ್ರಮದಲ್ಲಿರುವ ಇಲ್ಲಿನ ಸಾಸ್ತಾನದ ಪಾಂಡೇಶ್ವರ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಅಳಿವಿನಂಚಿನಲ್ಲಿರುವ ಸಾಕಷ್ಟು ಕನ್ನಡ ಮಾಧ್ಯಮಗಳ ಶಾಲೆಗಳು ಚಿಗುರೊಡೆಯುತ್ತಿವೆ ಈ ಹಿನ್ನಲ್ಲೆಯನ್ನು ಗಮನದಲ್ಲಿರಿಸಿ ಪ್ರತಿಯೊರ್ವರು ಶಾಲಾ ಉಳಿವಿಗೆ ಶ್ರಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಈ ಬಾರಿಯ ಅಂತರಾಷ್ಟ್ರೀಯ ಪಂಜ ಕುಸ್ತಿಯಲ್ಲಿ ಎಡಗೈ ಹಾಗೂ ಬಲಗೈ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಪಾಂಡೇಶ್ವರ ಸುರೇಶ್.ಬಿ.ಪೂಜಾರಿ ಹಾಗೂ ಆಸರೆ ಅನಿಮಲ್ ಟ್ರಸ್ಟ್‌ನ ಸ್ಥಾಪಕಿ ಸಾಕ್ಷಿ ಕಾಮತ್ ಇವರುಗಳನ್ನು ಸನ್ಮಾನಿಸಲಾಯಿತು. ಆಟೊ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಮುಖ್ಯ ಅತಿಥಿಗಳಾಗಿ ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ, ಕ್ಯಾಥೋಲಿಕ್ ಸಭಾ ಅಧ್ಯಕ್ಷ ಮೈಕಲ್ ಲೂವಿಸ್ , ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ರಮೇಶ್ ಪೂಜಾರಿ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಜಾನೇಶ್ವರಿ ಉಡುಪ ,ಸುರಕ್ಷಾ ಸಮಿತಿ ಅಧ್ಯಕ್ಷ ಕುಮಾರ ಪೂಜಾರಿ ,ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ, ಸುರೇಶ್ ಪೂಜಾರಿ ಸ್ವಾಗತಿಸಿದರು, ಮುಖ್ಯೋಪಾಧ್ಯಾಯರು ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಬಾಳಪ್ಪ ಅವಾಲಿ ಧನ್ಯವಾದಗೈದರು.











