ಬೈಂದೂರಿನಲ್ಲಿ ಜನವರಿ 7ರಂದು ನಡೆಯುವ ರಾಜ್ಯ ಮಟ್ಟದ ಕಂಬಳಕ್ಕೆ ಮುಹೂರ್ತ

0
354

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: 2024ರ ಜನವರಿ 07 ರಂದು ಬೈಂದೂರಿನ ಗಂಗನಾಡು ಸಮೀಪದ ಕ್ಯಾರ್ತೂರು ಕಂಬಳ ಗದ್ದೆಯಲ್ಲಿ ನಡೆಯುವ ರಾಜ್ಯ ಮಟ್ಟದ ಹೊನಲು ಬೆಳಕಿನ ಕಂಬಳೋತ್ಸವಕ್ಕೆ ಶುಕ್ರವಾರ ಕಂಬಳಗದ್ದೆ ಮುಹೂರ್ತ ಕಾರ್ಯಕ್ರಮ ನಡೆಯಿತು.

Click Here

ಕಂಬಳ ಗದ್ದೆಯ ಮುಹೂರ್ತ ನೆರವೇರಿಸಿ ಮಾತನಾಡಿದ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಗಂಗನಾಡು, ಕ್ಯಾರ್ತೂರು, ವನರೊಡ್ಡು ಭಾಗದಲ್ಲಿ ಧಾರ್ಮಿಕ ಹಿನ್ನೆಲೆಯ ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ನರಸಿಂಹ ದೇವಸ್ಥಾನಗಳನ್ನು ಹೊಂದಿದ್ದು, ಕೃಷಿಯೇ ಇಲ್ಲಿನ ಜನರ ಬದುಕಾಗಿದೆ. ವಾರ್ಷಿಕವಾಗಿ ಗ್ರಾಮೀಣ ಭಾಗದ ರೈತರನ್ನು ಒಗ್ಗೂಡಿಸುವ ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಬೈಂದೂರಿನಲ್ಲಿ ರಾಜ್ಯಮಟ್ಟದ ಕಂಬಳವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಕಡೆಯಿಂದ ಹತ್ತು ಸಾವಿರಕ್ಕೂ ಅಧಿಕ ರೈತರು ಆಗಮಿಸಲಿದ್ದಾರೆ. ಅತ್ಯಾಧುನಿಕ ರೀತಿಯಲ್ಲಿ ಕಂಬಳವನ್ನು ಆಯೋಜಿಸಿದ್ದು ಕಂಬಳದಲ್ಲಿ ವಿಜೇತರಾದವರಿಗೆ ಚಿನ್ನದ ಪದಕಗಳನ್ನು ನೀಡಲಾಗುವುದು. ಕಂಬಳ ಸಮಿತಿ ಸೇರಿದಂತೆ ಎಲ್ಲಾ ಹಿರಿಯರ ಮತ್ತು ವಿವಿಧ ಸಮುದಾಯಗಳ ಸಹಕಾರದೊಂದಿಗೆ ಅದ್ದೂರಿಯ ಬೈಂದೂರು ಕಂಬಳೋತ್ಸವ ನಡೆಯಲಿದೆ. ಈ ಸಂಧರ್ಭದಲ್ಲಿ ಸಾಧಕ ಕಂಬಳದ ಓಟಗಾರರನ್ನು ಹಿರಿಯ ರೈತರನ್ನು ಹಾಗೂ ಕಂಬಳದ ಪೋಷಕರನ್ನು ನಮ್ಮಾನಿಸಲಾಗುವುದು ಎಂದರು.

ಸ್ಥಳೀಯ ಪುರೋಹಿತ ವಾಸುದೇವ ಅವರು ಮುಹೂರ್ತಪೂಜಾ ವಿಧಿ ವಿಧಾನ ಕಾರ್ಯಗಳನ್ನು ಪೂರೈಸಿದರು. ಈ ಸಂದರ್ಭ ಮಂಜು ಪೂಜಾರಿ ಸಸಿಹಿತ್ಲು, ಗಣಪ ಮರಾಠಿ, ರಾಜು ಮರಾಠಿ ಬೆಳಕೊಡ್ಲು, ರಾಜು ದೇವಪ್ಪನಡೆ, ದೇವಪ್ಪ ಹಂಡೆ, ಶಿವಯ್ಯ ಗಂಗನಾಡು, ಹರೀಶ್ ಮರಾಠಿ ಗಂಗನಾಡು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ರು.

Click Here

LEAVE A REPLY

Please enter your comment!
Please enter your name here