ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಾಮಾನ್ಯ ವ್ಯಕ್ತಿಯಾಗಿ ಬದುಕುವ ಮೂಲಕ ಸರಳ ವ್ಯಕ್ತಿತ್ವ ಹೊಂದಿದ ಯೇಸು ಕ್ರಿಸ್ತರು ಪರಸ್ಪರ ಸೌಹಾರ್ದತೆ ಸಾರಿದವರು ಎಂದು ಕುಂದಾಪುರ ಹೋಲಿ ರೋಜರಿ ಚರ್ಚಿನ ಧರ್ಮಗುರು ಫಾದರ್ ಸ್ಟ್ಯಾನಿ ತಾವ್ರೋ ಹೆಳಿದರು.
ಅವರು ಭಾನುವಾರ ಹೋಲಿ ರೋಜರಿ ಶಾಲಾ ಮೈದಾನದಲ್ಲಿ ಕೆಥೋಲಿಕ್ ಸಭಾ ಉಡುಪಿ ಪ್ರದೇಶ್(ರಿ.), ಕಥೋಲಿಕ ಸಭಾ ವಲಯ ಸಮಿತಿ – ಶೆವೊಟ್ ಪ್ರತಿಷ್ಠಾನ(ರಿ.) ಕುಂದಾಪುರ, ಹೋಲಿ ರೋಜರಿ ಚರ್ಚ್, ಕುಂದಾಪುರ ಘಟಕದ ಆಶ್ರಯದಲ್ಲಿ ನಡೆದ ಸೌಹಾರ್ದ ಕ್ರಿಸ್ಮಸ್ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಿಸೆಂಬರ್ 25ರಂದು ನಾವು ಕ್ರಿಸ್ಮಸ್ ಹಬ್ಬ ಆಚರಣೆ ನಡೆಯುತ್ತದೆ. ಎರಡು ಸಾವಿರ ವರ್ಷಗಳ ಹಿಂದೆ ಹುಟ್ಟಿದ ಯೇಸು ಕ್ರಿಸ್ತರ ಸೌಹಾರ್ದತೆ ಹಾಗೂ ಸಹಬಾಳ್ವೆ ಯನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಸೌಹಾರ್ದ ಕ್ರಿಸ್ಮಸ್ ಹಮ್ಮಿಕೊಂಡಿರುವುದು ಸಂತೋಷದ ವಿಚಾರ ಎಂದರು. ಜಗತ್ತಿನೆಲ್ಲೆಡೆ ಶಾಂತಿ ಸೌಹಾರ್ದತೆ ನೆಲೆಸಲಿ ಎಂದು ಶುಭ ಹಾರೈಸಿದರು.
ಸೌಹಾರ್ದ ಕ್ರಿಸ್ಮಸ್ ಸಂಭ್ರಮದ ಸಂದೇಶವನ್ನು ಉಪನ್ಯಾಸಕ ಸುಜೇಂದ್ರ ಹಂದೆ ಮಾತನಾಡಿ, ಈ ಜಗತ್ತಿನ ಒಳಿತಿಗಾಗಿ ಶ್ರಮಿಸಿದವರನ್ನು ನೆನಪಿಸಿಕೊಳ್ಳದೇ ಹೋದರೆ ಮತ್ತು ಅವರು ಹಾಕಿಕೊಟ್ಟ ಆದರ್ಶಗಳನ್ನು ಪಾಲಿಸದೇ ಇದ್ದರೆ ನಮ್ಮ ಬದುಕು ಅಪೂರ್ಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಚೈತನ್ಯ ಸ್ಷೇಷಲ್ ಸ್ಕೂಲ್ ಮುಖ್ಯೋಪಾಧ್ಯಾಯನಿ ಬಿ. ಲೀಲಾವತಿ ಕಾರ್ಕಡ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಕಲ್ಪನಾ ಪ್ರಭಾಕರ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಕಥೋಲಿಕ ಸಭೆಯ ವಲಯ ಅಧ್ಯಕ್ಷ ವಿಲ್ಸನ್ ಡಿ’ಆಲ್ಮೇಡಾ ವಹಿಸಿದ್ದರು. ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮದ ಸಂಚಾಲಕ ಜೊನ್ಸನ್ ಡಿ’ಆಲ್ಮೇಡಾ, ಕುಂದಾಪುರ ಕಥೋಲಿಕ ಸಭೆ ವಲಯ ಕಾರ್ಯದರ್ಶಿ ಗ್ರೇವಿನ್ ಪಸನ್ನ್, ನಿಕಟ ಪೂರ್ವ ಅಧ್ಯಕ್ಷೆ ಶಾಂತಿ ಪಿರೇರಾ, ಕುಂದಾಪುರ ಶೆವೊಟ್ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಉಪಸ್ಥಿತರಿದ್ದರು.
ಡಾ.ಸೋನಿ ಡಿ’ಕೋಸ್ತಾ ಕಾರ್ಯಕ್ರಮ ನಿರೂಪಿಸಿದರು, ಕುಂದಾಪುರ ಘಟಕದ ಅಧ್ಯಕ್ಷೆ ಶೈಲಾ ಆಲ್ಮೇಡಾ ಸ್ವಾಗತಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.











