ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಸಾಲಿಗ್ರಾಮ ಪಾರಂಪಳ್ಳಿಯ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪ್ರತಿವರ್ಷ ಅಶಕ್ತರ ನೆರವಿಗಾಗಿ ಏರ್ಪಡಿಸುವ ಯಕ್ಷಗಾನ ಕಾರ್ಯಕ್ರಮದ ವೇದಿಕೆಯಲ್ಲಿ ವಿನ್‍ಲೈಟ್ ಸ್ಪೋರ್ಟ್ಸ್ ಕ್ಲಬ್ ಪುರಸ್ಕಾರ ನೀಡುತ್ತಾ ಬಂದಿದ್ದು ಈ ಬಾರಿ ವೈದ್ಯಕೀಯ ಕ್ಷೇತ್ರ ಸಾಧಕ ಶಕ್ತಿಗಳಾದ ಬೆಂಗಳೂರಿನ ಶೇಖರ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಷ್ಣುಮೂರ್ತಿ ಐತಾಳ್, ಹಾಗೂ ಕೆ.ಎಂ.ಸಿ ಮಂಗಳೂರು ಇಲ್ಲಿನ ಮುಖ್ಯ ವೈದ್ಯ ಡಾ.ಮಧುಸೂದನ್ ಉಪಾಧ್ಯಾ, ಲಿಮ್ಕಾ ದಾಖಲೆಯ ಸರದಾರ ಈಜುಪಟು ಗೋಪಾಲ್ ಖಾರ್ವಿ ಇವರುಗಳಿಗೆ ಪಾರಂಪಳ್ಳಿ ಗುಡ್ಡಿ ಶಾಲೆ ಸನಿಹದಲ್ಲಿ ಡಿ.23ರಂದು ನಡೆಯುವ ವೇದಿಕೆಯಲ್ಲಿ ಈ ಪುರಸ್ಕಾರ ನೀಡಿಗೌರವಿಸಲಿದೆ. ಅಲ್ಲದೆ ಅದೇ ವೇದಿಕೆಯಲ್ಲಿ ಕೆಲವು ಅಶಕ್ತ,ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











