ಕುಂದಾಪುರ: ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಯಂಗ್ ಲೀಡರ್ಸ್ ಅವಾರ್ಡ್ – ಎಸ್.ಆರ್.ಎಸ್. ಕಾಲೇಜಿನ ಕೃತಿ ಪ್ರಥಮ

0
382

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಂದಿನ ಯುಗ ಸ್ಪರ್ಧಾತ್ಮಕ ಯುಗ, ವಿಶ್ವದಾದ್ಯಂತ ಸ್ಪರ್ಧೆ ಇರುತ್ತದ. ಸಂಸ್ಥೆ ಗಟ್ಟಿಯಾಗಿ ಬೆಳೆಸಲಿಕ್ಕೆ ಸಾಕಷ್ಟು ಸವಾಲುಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ಯಾರು ಸೋಲುದಿಲ್ಲ, ಭಾಗವಹಿಸುವುದರ ಮೂಲಕ ನಮ್ಮಲ್ಲಿ ಆತ್ಮ ವಿಶ್ವಾಸ ಹೆಚ್ಚುವುದರ ಮೂಲಕ ಮುಂದಿನ ದಿನಗಳಲ್ಲಿ ಗೆಲುವಿಗೆ ಸಹಕಾರಿಯಾಗುತ್ತದೆ. ನಾವು ಲೀಡರ್ ಆಗಬೇಕಾದರೆ ನಮ್ಮಲ್ಲಿ ಸಂವಹನ ಕೌಶಲ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದು ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ ಹೇಳಿದರು.
ಕುಂದಾಪುರದ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆ, ಇಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಆಚರಣೆಯೊಂದಿಗೆ ‘ಐ.ಎಂ.ಜೆ.ಐ. ಎಸ್.ಸಿ.ಯಂಗ್ ಲೀಡರ್ ಅವಾರ್ಡ್ 2024’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊದಲ ಸುತ್ತಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ 22 ಕ್ಕೂ ಕಾಲೇಜಿನ 200 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಪೈಕಿ ಅಂತಿಮ ಹಂತದ ಸುತ್ತಿಗೆ ಆಯ್ಕೆಯಾದ 15 ಕಾಲೇಜಿನ 45 ವಿದ್ಯಾರ್ಥಿಗಳು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಲಯನ್ ನೀಲಕಂಠ ಎಂ ಹೆಗ್ಡೆ ಲಯನ್ಸ್ ಕ್ಲಬ್ ನ ಹಿಂದಿನ ಜಿಲ್ಲಾ ಗವರ್ನರ್ ಹಾಗೂ ಅಂತರಾಷ್ಟ್ರೀಯ ಪ್ರೇರಕ ತರಬೇತುದಾರರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ಸ್ವಾಮಿ ವಿವೇಕಾನಂದರು ಭಾರತ, ಭಾರತ ಸಂಸ್ಕೃತಿಯ ಕುರಿತು ಜಗತ್ತಿಗೆ ತಿಳಿಸಿದಂತಹ ಮಹಾಪುರುಷರು. ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಅವರ ಬದುಕಿನ ಜೀವನವನ್ನು ಅರ್ಥೈಸಿಕೊಂಡರೆ ಇಡೀ ಜಗತ್ತನ್ನು ಅರ್ಥೈಸಿಕೊಂಡ ಹಾಗೆ. ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ನಮ್ಮ ಈ ಸಂಸ್ಥೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ವಿದ್ಯಾರ್ಥಿಗಳು ನಾಳೆಯ ಬದುಕಿನ ಕನಸನ್ನು ಕಟ್ಟಿಕೊಳ್ಳಿ. ಕೇವಲ ಗೆಲುವಿನ ಹಿಂದೆ ಅಲ್ಲ, ಗೆಲುವು ಸಿಗುವವರೆಗೂ ಪ್ರಯತ್ನ ಪಡಬೇಕು. ಹಾಗೆ ತಮ್ಮ ನಂಬಿಕೆ, ವಿಶ್ವಾಸಗಳು ಅರಿಷಡ್ವರ್ಗಗಳನ್ನು ಬಿಟ್ಟು ತತ್ವದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಮತ್ತು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಅವಕಾಶಗಳನ್ನು ರೂಪಿಸಿಕೊಂಡು ಜೀವನವನ್ನು ಸಾರ್ಥಕ ಗೊಳಿಸಿ ಎಂದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 5 ಸಾವಿರ ನಗದು ಪ್ರಥಮ ಬಹುಮಾನ ಎಸ್. ಆರ್. ಎಸ್. ಕಾಲೇಜು ಉಡುಪಿ ಇದರ ಕೀರ್ತಿ ಪಡೆದುಕೊಂಡರು. ಎರಡು ಸಾವಿರ ರೂಪಾಯಿ ನಗದು ಎರಡನೇ ಬಹುಮಾನ ಎಸ್ ಆರ್ ಎಸ್ ಕಾಲೇಜು ಉಡುಪಿ ಇದರ ಕೈತ್ಲಿನ್ , ಮೂರನೇ ಬಹುಮಾನ ಸಿದ್ಧಾರ್ಥ ಪಿಯು ಕಾಲೇಜ್ ಭಟ್ಕಳ ಇದರ ವಿದ್ಯಾರ್ಥಿನಿ ರಚನಾ ಆಚಾರ್ಯ ಪಡೆದುಕೊಂಡರು.
ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಪ್ರೊ. ಜಯಶೀಲ ಕುಮಾರ್ ವರದಿ ವಾಚಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ| ಪ್ರತಿಭಾ ಪಟೇಲ್ ಎಮ್.ಉಪಸ್ಥಿತರಿದ್ದರು.  ಉಪಪ್ರಾಂಶುಪಾಲ ಪ್ರೊ ಜಯಶೀಲ ಕುಮಾರ್ ಕಾರ್ಯಕ್ರಮದ ವರದಿ ವಾಚಿಸಿದರು. ಅಸಿಸ್ಟೆಂಟ್ ಪ್ರೊಫೆಸರ್ ಸುಮನ ಸಂಜೆಯ ಕಾರ್ಯಕ್ರಮ ನಿರೂಪಿಸಿದರು. ಸ್ವರ್ಣ ನಾರಾಯಣಿ ವಂದಿಸಿದರು.
Click Here

LEAVE A REPLY

Please enter your comment!
Please enter your name here