ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಿರುಪತಿಯಲ್ಲಿ ಪೂಜಿಸಲ್ಪಡುವ ಪ್ರಭು ಶ್ರೀ ರಾಮಚಂದ್ರ ಸೀತಾದೇವಿ ಲಕ್ಷ್ಮಣ, ಹನುಮಂತ ದೇವರುಗಳ ಮೂರ್ತಿಗೆ ವಿಶೇಷ ಪೂಜೆ

0
248

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಅಯೋಧ್ಯೆಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಿನ್ನಲೆಯಲ್ಲಿ ಇಲ್ಲಿನ ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾದಲ್ಲಿ ಸೋಮವಾರದಂದು ಹಿಂದೂ ಮುಖಂಡರು ಹಾಗೂ ಗ್ರಾಮಸ್ಥರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಬೆಳಿಗ್ಗೆ 9 ರಿಂದ ವಿವಿಧ ಭಜನಾ ತಂಡಗಳಿಂದ ವಿಶೇಷ ಭಜನಾ ಸಂಕೀರ್ತನೆ ,ವಿಶೇಷವಾಗಿ ಅಪರೂಪ ಎಂಬಂತೆ ತಿರುಪತಿಯಲ್ಲಿ ಪೂಜಿಸಲ್ಪಡುವ ಪ್ರಭು ಶ್ರೀ ರಾಮಚಂದ್ರ ಸೀತಾದೇವಿ ಲಕ್ಷ್ಮಣ ದೇವರು ಹಾಗೂ ಹನುಮಂತ ದೇವರುಗಳ ಮೂರ್ತಿಯನ್ನು ಗರಿಕೆ ಮಠದಿಂದ ಭವ್ಯ ಮೆರವಣಿಗೆಯ ಮೂಲಕ , ದೇಗುಲಕ್ಕೆ ಕರತರಲಾಯಿತು.

Click Here

ತಿರುಪತಿಯ ಅರ್ಚಕರಿಂದ ಶ್ರೀ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಹಾಗೂ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಲಾಯಿತು.ಡಿಜಿಟಲ್ ಪರದೆಯ ಮೂಲಕ ಶ್ರೀ ರಾಮ ಪ್ರಾಣಪ್ರತಿಷ್ಠೆಯನ್ನು ಶ್ರೀರಾಮ ಭಕ್ತರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಯಿತು.ಅಪರಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ದೀಪೋತ್ಸವ ಕಾರ್ಯಕ್ರಮಗಳು ಜರಗಿದವು. ಸಂಘಟನೆಯ ಪ್ರಮುಖರಾದ ವೇಣುಗೋಪಾಲ ಶೆಟ್ಟಿ ಸೇರಿದಂತೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

 

Click Here

LEAVE A REPLY

Please enter your comment!
Please enter your name here