ಕುಂದಾಪುರ ಮಿರರ್ ಸುದ್ದಿ…

ಕೋಟ: ಅಯೋಧ್ಯೆಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಿನ್ನಲೆಯಲ್ಲಿ ಇಲ್ಲಿನ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾದಲ್ಲಿ ಸೋಮವಾರದಂದು ಊರಿನ ಸಮಾನಮನಸ್ಕ ಭಕ್ತರು ಹಾಗೂ ದೇಗುಲದ ವತಿಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಬೆಳಿಗ್ಗೆ 9 ರಿಂದ ವಿವಿಧ ಭಜನಾ ತಂಡಗಳಿಂದ ವಿಶೇಷ ಭಜನಾ ಸಂಕೀರ್ತನೆ ,ವಿಶೇಷವಾಗಿ ಅಪರೂಪ ಎಂಬಂತೆ ತಿರುಪತಿಯಲ್ಲಿ ಪೂಜಿಸಲ್ಪಡುವ ಪ್ರಭು ಶ್ರೀ ರಾಮಚಂದ್ರ ಸೀತಾದೇವಿ ಲಕ್ಷ್ಮಣ ದೇವರು ಹಾಗೂ ಹನುಮಂತ ದೇವರುಗಳ ಮೂರ್ತಿಯು ಬೆಳಿಗ್ಗೆ 10:30 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ಆಗಮಿಸಿ , ದೇವಳದಲ್ಲಿ ವಿರಾಜಮಾನರಾಗಿ ತಿರುಪತಿಯ ಅರ್ಚಕರಿಂದ ಶ್ರೀ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಹಾಗೂ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಲಾಯಿತು.ಅಪರಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ದೀಪೋತ್ಸವ
ಕಾರ್ಯಕ್ರಮಗಳು ಜರಗಿದವು.
ಕೋಟ ಅಮೃತೇಶ್ವರಿ ದೇಗುಲದ ಮಾಜಿ ಅಧ್ಯಕ್ಷ ಆನಂದ್ ಸಿ ಕುಂದರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಶ್ರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ,ಶ್ರೀ ದೇಗುಲದ ಟ್ರಸ್ಟಿ ಅಶೋಕ್ ಶೆಟ್ಟಿ,ಸುಫಲ ಶೆಟ್ಟಿ, ದಿನೇಶ್ ಆಚಾರ್, ಬಾಬು.ರವಿ ಐತಾಳ್ ಅಚ್ಯುತ್ ಹಂದೆ,ದಿವ್ಯ ಪ್ರಭು,ಪ್ರಮುಖರಾದ ಮಹೇಶ್ ಹೊಳ್ಳ,ಗೋಪಾಲ್ ಪೈ,ಅರುಣಾಚಲ ಮಯ್ಯ,ಭಾರತಿ.ವಿ.ಮಯ್ಯ, ವಿಷ್ಣುಮೂರ್ತಿ ಮಯ್ಯ ಊರಿನ ಹಿರಿಯ ಗಣ್ಯರು ಮತ್ತಿತರರು ಉಪಸ್ಥಿತರಿದ್ದರು.











