ಕುಂದಾಪುರ :ಗ್ರಾಮೀಣ ವಿದ್ಯಾರ್ಥಿಗಳ ತಂತ್ರಜ್ಞಾನದ ಅರಿವಿಗೆ ಎ.ಟಿ.ಎಲ್ ಸಹಕಾರಿ – ಡಾ ಅಶೋಕ್ ಕಾಮತ್

0
191

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ದಿಯೊಂದಿಗೆ ಗ್ರಾಮೀಣ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನದ ಮತ್ತು ತಂತ್ರಜ್ಞಾನದ ಅರಿವಿಗೆ ಹಾಗೂ ಜಗತ್ತಿನ ವಿನೂತನ ಆವಿಷ್ಕಾರದ ಚಿಂತನೆಗೆ ಅಟಲ್ ಟಿಂಕರಿಂಗ್ ಲ್ಯಾಬ್ ಸಹಕಾರಿಯಾಗಲಿದೆ ಎಂದು ಉಡುಪಿ ಜಿಲ್ಲಾ ಡಯಟ್ ನ ಉಪ ಪ್ರಾಂಶುಪಾಲರಾದ ಡಾ. ಅಶೋಕ್ ಕಾಮತ್ ಅಭಿಪ್ರಾಯ ಪಟ್ಟರು

ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ನಡೆದ ಉಡುಪಿ ಜಿಲ್ಲಾ ಅಟಲ್ ಟಿಂಕರಿಂಗ್ ಲ್ಯಾಬ್ ನ ಸುಮಾರು 50 ಶಾಲೆಗಳ ಶಿಕ್ಷಕರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Click Here

ವಾಸುದೇವ್ ಆಚಾರ್ಯ ಕೋ ಆರ್ಡಿನೇಟರ್ ಐ.ಟಿ ವಿಂಗ್ ಇಂಜಿನಿಯರಿಂಗ್ ಕಾಲೇಜ್ ನಿಟ್ಟೆ ಇವರು ಕಾರ್ಯಾಗಾರವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು

ಸಭೆಯಲ್ಲಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಉಡುಪಿ ಡಯಟ್ ಹಿರಿಯ ಉಪನ್ಯಾಸಕ ಪ್ರಭಾಕರ್ ಮಿತ್ಯಂತಾಯ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಪ್ರಾಂಶುಪಾಲ ಸುಶೀಲಾ ಹೊಳ್ಳ, ಉಡುಪಿ ಡಯಟ್ ಎ ಟಿ ಎಲ್ ನೋಡಲ್ ಅಧಿಕಾರಿ ಸುಬ್ರಹ್ಮಣ್ಯ ಭಟ್ , ಕೆಪಿಎಸ್ ಕೋಟೇಶ್ವರ ಉಪ ಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ, ಉಪನ್ಯಾಸಕ ಗಣೇಶ್ ಕೃಷ್ಣ ಭಾಗವತ್ ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಶಿಕ್ಷಕ ಶ್ರೀಕಾಂತ್ ನೆರವೇರಿಸಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಪ್ರಭಾಕರ ಮಿತ್ಯಂತಾಯ ವಂದಿಸಿದರು. ಸಂಸ್ಥೆಯ ನೋಡಲ್ ಶಿಕ್ಷಕಿ ಜಯಶ್ರೀ ಭಟ್ ಸಹಕರಿಸಿದರು.

Click Here

LEAVE A REPLY

Please enter your comment!
Please enter your name here