ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ ಉದ್ಯಮಶಿಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಉಡುಪಿ ಜಿಲ್ಲೆ, ಪ್ರಧಾನಮಂತ್ರಿಸ್ವ ನಿಧಿ ಯೋಜನೆಯಡಿಯಲ್ಲಿ ಜನವರಿ 26 ರಂದು ದೆಹಲಿಯಲ್ಲಿ ಜರಗುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಸರಕಾರದಿಂದ ಆಯ್ಕೆಯಾದ ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥ ಮಣಿಕಂಠ ಹಾಗೂ ನಿರ್ಮಲ ದಂಪತಿಗಳನ್ನು ಪುರಸಭೆಯ ವತಿಯಿಂದ ಸನ್ಮಾನಿಸಲಾಯಿತು. ಕುಂದಾಪುರದ ಶಾಸಕರಾದ ಮಾನ್ಯ ಕಿರಣ್ ಕುಮಾರ್ ಕೊಡ್ಗಿ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ, ಪುರಸಭೆಯ ಆಡಳಿತ ಅಧಿಕಾರಿಯಾಗಿರುವ ರಶ್ಮಿ ಎಸ್. ಆರ್ ಸನ್ಮಾನಿಸಿ ಗೌರವಿಸಿದರು.
ಪುರಸಭೆಯ ಮುಖ್ಯಾಧಿಕಾರಿ ಆರ್ ಮಂಜುನಾಥ್ , ಜಿಲ್ಲಾ ಲೀಡ್ಕರ್ ನಿಗಮದ ಸಂಯೋಜಕ ತಿಪ್ಪೆ ಸ್ವಾಮಿ, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾಕರ್, ಪುರಸಭಾ ಪರಿಸರ ಅಭಿಯಂತರಾದ ಗುರು ಪ್ರಸಾದ್ ಶೆಟ್ಟಿ, ಸಮುದಾಯದ ಸಂಘಟನಾಧಿಕಾರಿಯಾದ ಶರತ್ ಎಸ್ ಖಾರ್ವಿ, ಕಂದಾಯ ಅಧಿಕಾರಿಗಳಾದ ಅಂಜನಿ ಗೌಡ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಘವೇಂದ್ರ ನಾಯ್ಕ್, ಮತ್ತು ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.











