ಕುಂದಾಪುರ ಮಿರರ್ ಸುದ್ದಿ…
ಕೋಟ :ಬಿಜೆಪಿ ರಾಷ್ಟ್ರೀಯ ಪ್ರದಾನಕಾರ್ಯದರ್ಶಿ ಸಿ.ಟಿ ರವಿ ಬುಧವಾರ ಸಾಲಿಗ್ರಾಮದ ಡಿವೈನ್ ಪಾರ್ಕ ಹಾಗೂ ಮೂಡುಗಿಳಿಯಾರು ಎಸ್. ಎಚ್.ಆರ್ ಎಫ್‍ಗೆ ಭೇಟಿ ನೀಡಿ ಕೆಲ ಹೊತ್ತು ಅಲ್ಲಿ ಕಳೆದು ಅಲ್ಲಿನ ಆಧ್ಯಾತ್ಮ ಮತ್ತು ಅತ್ಯುತ್ತಮ ಆರೋಗ್ಯವನ್ನು ಪ್ರತಿಯೊಬ್ಬರಿಗೂ ಕರುಣಿಸಿ ಕೊಡುವ ಅದ್ಭುತ ಕೇಂದ್ರ ಎಂದು ಬಣ್ಣಿಸಿದ ಅವರು ಆಧ್ಯಾತ್ಮಿಕ ಕ್ಷೇತ್ರವಾಗಿ ಪ್ರವಾಸಿಗರನ್ನು ವಿಶೇಷವಾಗಿ ಸೆಳೆಯುವ ಡಿವೈನ್ ಪಾರ್ಕಗೆ ಸ್ವಾಮೀ ವಿವೇಕಾನಂದರ ಆದರ್ಶಗಳನ್ನು ಬಿತ್ತರಿಸುವ ಕೇಂದ್ರವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಈ ವೇಳೆ ಅದರ ಮುಖ್ಯಸ್ಥ ಡಾ.ವಿವೇಕ್ ಉಡುಪ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.











