ಕುಂದಾಪುರ :ಜಗತ್ತಿನ ಅತೀ ದೊಡ್ಡ ಸಂವಿಧಾನ ಅಂಬೇಡ್ಕರ್ ನೀಡಿದ್ದಾರೆ – ರಶ್ಮಿ ಎಸ್ ಆರ್

0
232

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವಿಶ್ವದ ಬೇರೆ ಬೇರೆ ದೇಶಗಳಿಂದ ಉತ್ತಮವಾದುದನ್ನು ಎರವಲು ಪಡೆದು ಡಾ| ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ನಮ್ಮ ದೇಶದ ಸಂವಿಧಾನ ಜಗತ್ತಿನಲ್ಲಿಯೇ ದೊಡ್ಡ ಹಾಗೂ ಬಲಿಷ್ಠವಾದುದು. ನಮ್ಮಿಂದಾಗುವಂತಹ ಸಹಾಯವನ್ನು ದೇಶಕ್ಕೆ, ಸಮಾಜಕ್ಕೆ ಮಾಡೋಣ, ಬೀಚ್ ಸ್ವಚ್ಛತೆಯಂತಹ ಸಾಮಾಜಿಕ ಕೈಂಕರ್ಯದಲ್ಲಿ ಭಾಗಿಯಾಗೋಣ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮೀ ಎಸ್. ಆರ್. ಕರೆ ನೀಡಿದರು.

ಅವರು ಶುಕ್ರವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಗಣರಾಜ್ಯೋತ್ಸವದ ಧ್ವಜಾರೋಹಣಗೈದು, ಪಥಸಂಚಲನೆಯ ಗೌರವರಕ್ಷೆ ಸ್ವೀಕರಿಸಿ ಮಾತನಾಡಿದರು.

ಸ್ವಾತಂತ್ರ್ಯ ನಂತರ ಶೈಕ್ಷಣಿಕ, ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿ ಭಾರತದ ಬೌಗೋಳಿಕತೆಗೆ ಅನುಗುಣವಾಗಿ ಇತರೆ ದೇಶಗಳಿಗಿಂತ ಭಿನ್ನವಾಗಿ ರೂಪಿಸಲಾಗಿದ್ದು, ಅದರಂತೆ ಒಬ್ಬ ವ್ಯಕ್ತಿಯ ಬೆಳವಣಿಗೆಯಿಂದ ದೇಶದ ಬೆಳವಣಿಗೆಯು ಸಾಧ್ಯ. ಅದಕ್ಕೆ ಸಂವಿಧಾನವೇ ಶಕ್ತಿಯಾಗಿದೆ. ರಾಜ್ಯ ಹಾಗೂ ಕೇಂದ್ರದ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮೂಲಕ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸೋಣ ಎಂದರು.

Click Here

ನಗರ ಠಾಣಾಧಿಕಾರಿಗಳಾದ ಪ್ರಸಾದ್ ಕುಮಾರ್ ಕಮಾಂಡ್ ನೀಡಿದರೆ, ವಿನಯ ಕೊರ್ಲಹಳ್ಳಿ ನೇತೃತ್ವದಲ್ಲಿ ಪೊಲೀಸರ ತಂಡ, ಪುರಸಭೆಯ ಪೌರ ಕಾರ್ಮಿಕರ ತಂಡ, ಕುಂದಾಪುರದ ವಿ.ಕೆ.ಆರ್. ಆಚಾರ್ಯ ಆ. ಮಾ. ಶಾಲೆ, ಶ್ರೀ ವೆಂಕಟರಮಣ ಆ. ಮಾ. ಪ್ರೌಢಶಾಲೆ, ಸಂತ ಜೋಸೆಫ್ ಪ್ರೌಢಶಾಲೆ, ಸರಕಾರಿ ಮಾದರಿ ಹಿ.ಪ್ರಾ. ಶಾಲೆ (ಗರ್ಲ್ಸ್ ಸ್ಕೂಲ್), ಶಾಸಕರ ಮಾದರಿ ಹಿ.ಪ್ರಾ. ಶಾಲೆ ವಡೇರಹೋಬಳಿ, ಸಂತ ಮೇರಿಸ್ ಹಿ.ಪ್ರಾ. ಶಾಲೆ, ಸರಕಾರಿ ಬೋರ್ಡ್ ಹೈಸ್ಕೂಲ್, ವಡೇರಹೋಬಳಿ ಪ್ರೌಢಶಾಲೆ, ಸಂತ ಜೋಸೆಫ್ ಹಿ.ಪ್ರಾ. ಶಾಲೆಯ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಂತ ಜೋಸೆಫ್ ಹಿ.ಪ್ರಾ. ಶಾಲೆ ತಂಡ ಬ್ಯಾಂಡ್ ಸೆಟ್‌ನಲ್ಲಿ ಸಹಕರಿಸಿತು.

ಕೃಷಿ ಇಲಾಖೆಯಿಂದ ತಾಲೂಕು ಮಟ್ಟದ ಕೃಷಿ ಪ್ರಶಸ್ತಿಯನ್ನು ಕರುಣಾಕರ ಶೆಟ್ಟಿ ಕೆದೂರು, ನಿತ್ಯಾನಂದ ಶೇರೆಗಾರ್ ಬೀಜಾಡಿ, ಉಷಾ ಬಾಯರಿ ಕೆದೂರು, ಇಂದಿರಾ ಶೆಡ್ತಿ ಹಳ್ನಾಡು, ಲಕ್ಷ್ಮೀ ಕಾಳಾವರ, ರುಕ್ಕು ಕಾಳಾವರ, ಶ್ರೀನಿವಾಸ ಶಾನು‘ಗ್ ಕುಂದಬಾರಂದಾಡಿ, ಬಿ. ರತ್ನಾಕರ ಶೆಟ್ಟಿ ಉಳ್ಳೂರು-೭೪, ನಾರಾಯಣ ಶೆಟ್ಟಿ ಹೇರೂರು, ಬಚ್ಚು ದೇವಾಡಿಗ ಕಟ್‌ಬೆಲ್ತೂರು, ಸತೀಶ ಶೇರಿಗಾರ್ ಕಂದಾವರ ಅವರಿಗೆ ಪ್ರದಾನ ಮಾಡಲಾಯಿತು.

ವಿ.ಕೆ.ಆರ್. ಆಚಾರ್ಯ ಆ. ಮಾ. ಶಾಲೆ, ಹೋಲಿ ರೋಜರಿ ಆ.ಮಾ. ಶಾಲೆ, ಬಿ.ಆರ್. ರಾವ್ ಹ.ಪ್ರಾ.ಶಾಲೆ, ಶಾಸಕರ ಮಾದರಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಂದ ದೇಶ ‘ಕ್ತಿಯ ಸಾಂಸ್ಕೃತಿಕ ಕಾರ್‍ಯಕ್ರಮ ರಂಜಿಸಿತು. ಇದೇ ವೇಳೆ ಕಾರ್ಮಿಕರ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್‌ಗಳನ್ನು ಹಸ್ತಾಂತರಿಸಲಾಯಿತು.

ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ಕೆ.ಯು., ತಾ.ಪಂ. ಕಾರ್‍ಯನಿರ್ವಾಹಣಾಧಿಕಾರಿ ಪ್ರಶಾಂತ್ ವಿ.ರಾವ್, ಪುರಸ‘ ಮುಖ್ಯಾಧಿಕಾರಿ ಮಂಜುನಾಥ್, ಪುರಸಭಾ ಸದಸ್ಯರು, ಮಾಜಿ ಸದಸ್ಯರು, ವೃತ್ತ ನಿರೀಕ್ಷಕ ನಂದಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್, ಸಿಡಿಪಿಒ ಅನುರಾಧ, ಸಹಾಯಕ ನಿರ್ದೇಶಕರಾದ ಯುವಜನ ಸೇವಾ ಇಲಾಖೆಯ ಕುಸುಮಾಕರ ಶೆಟ್ಟಿ, ಕೃಷಿ ಇಲಾಖೆಯ ರೂಪಾ ಮಾಡ, ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ ವರ್ಣೇಕರ್, ಮೀನುಗಾರಿಕಾ ಇಲಾಖೆಯ ಸುಮಲತಾ, ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ ಸ್ವಾಗತಿಸಿ, ಬಿಇಒ ಶೋ‘ ಶೆಟ್ಟಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here