ರಾಜ್ಯ ಸರ್ಕಾರದ ಕಾಮಗಾರಿಗಳಿಗೆ ಮಂಜೂರಾದ ಅನುದಾನ ಬಿಡುಗಡೆ ಮಾಡಲಿ – ಶಾಸಕ ಗಂಟಿಹೊಳೆ ಆಗ್ರಹ

0
271

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ರಾಜ್ಯ ಸರ್ಕಾರ ಈ ಹಿಂದೆ ಕಾಮಗಾರಿಗಳಿಗೆ ಮಂಜೂರಾದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ತಕ್ಷಣ ರಾಜ್ಯ ಸರ್ಕಾರದ ಎಚ್ಚೆತ್ತುಕೊಂಡು ಅನುದಾನ ಬಿಡುಗಡೆ ಮಾಡಬೆಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಲವೆಡೆ ಚುನಾವಣೆ ಬಹಿಷ್ಕಾರದ ಬ್ಯಾನರ್ ಬಿದ್ದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಹಿಷ್ಕಾರದ ಬ್ಯಾನರ್ ಹಾಕಿರುವ ಪ್ರದೇಶಗಳಲ್ಲಿ ಬಾಖಿಯಾಗಿರುವ ಕಾಮಗಾರಿಗಳು ಈಗಾಗಲೇ ಮಂಜೂರಾಗಿರುವ ರಸ್ತೆಗಳು. ಹೊಸ ಸರ್ಕಾರದ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದರು

Click Here

ಇದೇ ಸಂದರ್ಭ ಮಾತನಾಡಿದ ಅವರು, ಬೈಂದೂರು ತಾಲೂಕಿನಲ್ಲಿ ಶೇ 60 ಸಿಬ್ಬಂದಿಗಳ ಕೊರತೆಯಿದೆ. ಇದರಿಂದಾಗಿ 94 ಸಿ ಹಕ್ಕು ಪತ್ರ ಸೇರಿದಂತೆ ಜನ ಸಾಮಾನ್ಯರಿಗೆ ಮೂಲಭೂತ ಸಮಸ್ಯೆಗಳ ಸಮಸ್ಯೆಗೆ ಸರ್ಕಾರದ ಸ್ಪಂದಿಸುತ್ತಿಲ್ಲ ಎಂದು ಹರಿ ಹಾಯ್ದಿದ್ದಾರೆ. ಪಂಚಗಂಗಾ ರೈಲಿಗೆ ಹೆಚ್ಚುವರಿ ಬೋಗಿಗಳಿಂದ ಸಮಯ ವಿಳಂಬವಾಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಲೂರು ಮಂಗಲುರು ರೈಲು ರಸ್ತೆಯಲ್ಲಿ 22 ಬೋಗಿಗಳಿಗೆ ಸಂಚರಿಸಲು ಅವಕಾಶ ಇದ್ದು, ಅದನ್ನು ಅನುಷ್ಠಾನಗೊಳಿಸಲು ಒತ್ತಾಯಿಸಲಾಗಿದೆ. ಯಾವುದೇ ಸಮಯ ವಿಳಂಬವಾಗದಂತೆ ಬೋಗಿಗಳನ್ನು ಹೆಚ್ಚಿಸಲು ವಿನಂತಿಸಲಾಗಿದೆ. ಅಲ್ಲದೇ ಹೆಚ್ಚುವರಿ ರೈಲು ಸಂಚಾರಕ್ಕೆ ಮತ್ತು ವಾರದಲ್ಲಿ ಎರಡು ಅಥವಾ ಮೂರು ದಿನ ಹೆಚ್ಚುವರಿ ರೈಲು ಸಂಚರಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಉಸ್ತುವಾರಿ ನೀಡಿದ್ದು ಈ ಜವಾಬ್ಧಾರಿಯನ್ನು ಸಂತೋಷದಿಂದ ನಿಭಾಯಿಸುತ್ತೇನೆ. ಈ ಹಿಮದೆ ತೆಲಂಗಾಣ ಚುನಾವಣೆಯಲ್ಲಿಯೂ ಎರಡು ಕ್ಷೇತ್ರಗಳ ಉಸ್ತುವಾರಿ ವಹಿಸಿದ ಅನುಭವವಿದೆ ಎಂದಿರುವ ಅವರು, ಪಕ್ಷ ನೀಡಿದ ಜವಾಬ್ಧಾರಿಯನ್ನು ನಿಷ್ಟೆಯಿಂದ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದರು.

Click Here

LEAVE A REPLY

Please enter your comment!
Please enter your name here