ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಫೆಬ್ರವರಿ 10ರಂದು ಕೋಟದಲ್ಲಿ ನಡೆಯಲಿರುವ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಪಂಚಾಯತ್‌ರಾಜ್ ನಗರ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಉತ್ಸವ ‘ಹೊಳಪು- 2024’ ಗ್ರಾಮ ಸರಕಾರದ ದಿಬ್ಬಣದ ಅಂಗವಾಗಿ ಶನಿವಾರ ಡಾ. ಶಿವರಾಮ ಕಾರಂತ ಮಹಾದ್ವಾರವನ್ನು ಹಾಗೂ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮ ಕೋಟ ವಿವೇಕ ಹೈಸ್ಕೂಲಿನಲ್ಲಿ ನಡೆಯಿತು.
ಸ್ವಾಗತಗೋಪುರವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿ,ಟೀ ಶರ್ಟ್ಬಿಡುಗಡೆಗೊಳಿಸಿದರು. ಬಳಿಕ ಹೊಳಪು ಕಾರ್ಯಕ್ರಮ ರೂಪುರೇಷೆಗಳ ಕುರಿತು ಚರ್ಚೆ ನಡೆಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 377 ಗ್ರಾಮ ಪಂಚಾಯತ್‌ಗಳು ಹಾಗೂ 17 ನಗರ ಸ್ಥಳೀಯಾಡಳಿತ ಸಂಸ್ಥೆಗಳ 6,000ಕ್ಕೂ ಅಧಿಕ ಜನಪ್ರತಿನಿಧಿಗಳು ಹಾಗೂ ಸಾವಿರಾರು ಅಧಿಕಾರಿ ಸಿಬ್ಬಂದಿಗಳು ಹೊಳಪು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಪಂ ಅಧ್ಯಕ್ಷರು,
ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವುಡ, ಪಂಚಾಯತ್ ಸದಸ್ಯ ಗೌತಮ್ ಅಲ್ತಾರು, ಗೋಪಾಡಿ ಪಂಚಾಯತ ಅಧ್ಯಕ್ಷ ಸುರೇಶ ಶೆಟ್ಟಿ, ವಾಸುಪೂಜಾರಿ, ವಿಠ್ಠಲ ಪೂಜಾರಿ
ಕಾರಂತ ಪ್ರತಿಷ್ಠಾನ ದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹರೀಶ್ ಶೆಟ್ಟಿ ಸ್ವಾಗತಿಸಿ, ನರೇಂದ್ರ ಕುಮಾರ್ ಕೋಟ ವಂದಿಸಿದರು.











