ಕುಂದಾಪುರದ ಉದ್ಯಮಿ “ಅಜಂತಾ ಪ್ರಿಂಟರ್ಸ್” ಮಾಲಕ ಎ. ಅನಂತಕೃಷ್ಣ ನಿಧನ

0
381

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕುಂದಾಪುರದ ಉದ್ಯಮಿ, “ಅಜಂತಾ ಪ್ರಿಂಟರ್ಸ್” ಮಾಲಕರಾದ ಸಾಮಾಜಿಕ ಧುರೀಣ ಎ. ಅನಂತಕೃಷ್ಣ ಕೊಡ್ಡಿಯವರು (72) ದಿನಾಂಕ 17 ರಂದು ಶನಿವಾರ ಬೆಳಿಗ್ಗೆ ನಿಧನರಾದರು.

Click Here

ಹಿರಿಯ ಸಮಾಜ ಸೇವಕರಾಗಿದ್ದು, ಕುಂದಾಪುರದ ಲಯನ್ಸ್‌ ಕ್ಲಬ್, ಬೋರ್ಡ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘ ಮುಂತಾದ ಸಂಘಟನೆಗಳಲ್ಲಿ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದವರು. ಕುಂದಾಪುರ ತಾಲೂಕು ಬಿಜೆಪಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದವರು. ಈಗ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಕ್ರೀಯಾಶೀಲರಾಗಿದ್ದರು. ತಮ್ಮ ನೇರ ನುಡಿ, ಮಾನವೀಯ ಸಾತ್ವಿಕ ಗುಣಗಳಿಂದ ಸಮಾಜದಲ್ಲಿ ಗೌರವಕ್ಕೆ ಪಾತ್ರರಾದವರು. ಇವರು ಪತ್ನಿ ಓರ್ವ ಪುತ್ರನನ್ನು ಅಗಲಿದ್ದಾರೆ.

ಇವರು ಮಾಜಿ ಶಾಸಕ, ಅಮಾಸೆಬೈಲು ದಿ. ಎ.ಜಿ.ಕೊಡ್ಲಿಯವರ ಸಹೋದರ ಹಾಗೂ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಲಿಯವರ ಚಿಕ್ಕಪ್ಪ. ಹಲವಾರು ಮಂದಿ ಗಣ್ಯರು ಇವರ ನಿಧನಕ್ಕೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಮೃತರ ಅಂತ್ಯ ಕ್ರಿಯೆಯನ್ನು ಅಮಾಸೆಬೈಲು, ಮಚ್ಚಟ್ಟು ಮೂಲ ಗೃಹದಲ್ಲಿ ನೆರವೇರಿಸಲಾಯಿತು.

Click Here

LEAVE A REPLY

Please enter your comment!
Please enter your name here