ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸವಾಲುಗಳನ್ನೇ ಸಾಧ್ಯತೆಯನ್ನಾಗಿಸಿಕೊಂಡು, ಬದುಕಲ್ಲಿ ಯಶ ಕಂಡವರು ಗಣೇಶ ಮೊಗವೀರರವರು.
ಮೂಲತ: ಹೆಮ್ಮಾಡಿಯವರಾದ ಇವರು ತೀರ ಬಡ ಕುಟುಂಬದಲ್ಲಿ ಜನಿಸಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿಯಲ್ಲಿ, ಪ್ರೌಢ ಶಿಕ್ಷಣವನ್ನು ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರದಲ್ಲಿ ವ್ಯಾಸಾಂಗ ಮಾಡಿ ಆ ಮೂಲಕ ಅಂದು 1996-97ರಲ್ಲಿ ಹೆಮ್ಮಾಡಿ ಪರಿಸರದಲ್ಲಿ
ಆಂಗ್ಲ ಮಾಧ್ಯಮದಲ್ಲಿ ಓದಿದ ಪ್ರಥಮ ವಿದ್ಯಾರ್ಥಿಯಾಗಿ ಹೊರಹೊಮ್ಮಿರುತ್ತಾರೆ. ಪದವಿ ಪೂರ್ವ ಶಿಕ್ಷಣವನ್ನು S.V ಪದವಿಪೂರ್ವ ಕಾಲೇಜು ಗಂಗೊಳ್ಳಿಯಲ್ಲಿ, ಪದವಿ ಶಿಕ್ಷಣವನ್ನು ಕುಂದಾಪುರದ ಭಂಡಾರ್ಕರ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಯುತ್ತಿದ್ದಂತೆ ಬಾಲ್ಯದಲ್ಲಿಯೇ ತಾನಿಟ್ಟುಕೊಂಡ ಜಿಲ್ಲಾಧಿಕಾರಿಯಾಗಬೇಕೆಂಬ ಕನಸನ್ನು ಈಡೇರಿಸಿಕೊಳ್ಳಲು ಉನ್ನತ ವಿದ್ಯಾಭ್ಯಾಸ ಹಾಗೂ ತರಬೇತಿಗಾಗಿ ಮುಂಬೈ ಹಾಗೂ ದೆಹಲಿಯಲ್ಲಿ ಎರಡು ವರ್ಷ I.A.S ತರಬೇತಿಯನ್ನು ಪಡೆದು, ತನ್ನ ಸ್ನಾತಕೋತ್ತರ ಶಿಕ್ಷಣವನ್ನು ಮುಂದುವರೆಸುತ್ತಾ ಸ್ನಾತಕೋತ್ತರ ಪದವಿಗಳಾದ M.Sc Mathematics ಹಾಗೂ M.sc Statistics ಪದವಿಯನ್ನು ಕ್ರಮವಾಗಿ ಮುಂಬೈ ವಿಶ್ವವಿದ್ಯಾಲಯ ಹಾಗೂ ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ಪೂರ್ಣಗೊಳಿಸಿದರು. 2011ರಲ್ಲಿ ಗಣಿತ ಉಪನ್ಯಾಸಕರಾಗಿ ವೃತ್ತಿಯನ್ನು ಪ್ರಾರಂಭಿಸಿ ದೂರದ ಊರುಗಳಾದ ಮಂಗಳೂರು, ಭಟ್ಕಳ, ಹೊನ್ನಾವರ, ಕುಮಟ, ಅಂಕೋಲ, ಕಾರವಾರ ಹಾಗೂ ಉಡುಪಿ, ಬೈಂದೂರು ಕುಂದಾಪುರಗಳಲ್ಲಿಯೂ ವಿದ್ಯಾರ್ಥಿಗಳಿಗೆ ಗಣಿತ ಪಾಠವನ್ನು ಹೇಳಿಕೊಟ್ಟು ಅಕ್ಷರದ ಅಮೃತವನ್ನು ಉಣಬಡಿಸಿ ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದಲ್ಲಿನ ಭಯವನ್ನು ದೂರ ಮಾಡಿದ ಪ್ರಸಿದ್ಧ ಗಣಿತ ಉಪನ್ಯಾಸಕರು ಶ್ರೀ ಗಣೇಶ ಮೋಗವೀರರವರು.ತನ್ನ ಒಂಬತ್ತು ವರ್ಷಗಳ ಉಪನ್ಯಾಸಕ ವೃತ್ತಿಯನ್ನು ಪೂರ್ಣಗೊಳಿಸುತ್ತಿರುವಾಗಲೇ
ತನ್ನ ಗುರುಗಳಾದಂತಹ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡ ಚಿತ್ರ ಕಾರಂತ್ ರವರ ಮಾರ್ಗದರ್ಶನದಲ್ಲಿ ಬೆಳೆದ ಪ್ರತಿಭಾನ್ವಿತ ಶಿಷ್ಯ ಗಣೇಶ ಮೊಗವೀರರಿಗೆ ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದರು. ಕೆಲವು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಕಾಲೇಜನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ಇವರಿಗೆ ಸಲ್ಲುತ್ತದೆ. ಭವಿಷ್ಯದಲ್ಲಿ ತನ್ನದೇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಬೇಕು ಎನ್ನುವ ಅವರ ಮಹದಾಸೆಗೆ ಸ್ಪೂರ್ತಿಯಾಗಿ 2022-23ರಲ್ಲಿ ಹೆಮ್ಮಾಡಿಯಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜನ್ನು ಆರಂಭಿಸಿದರು. ಪ್ರಸ್ತುತ ಸಮರ್ಪಣಾ ಎಜುಕೇಶನಲ್ ಟ್ರಸ್ಟ್ (ರಿ) ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಾಗೂ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಬಲಿಷ್ಟ ಉಪನ್ಯಾಸಕರ ತಂಡವನ್ನು ಕಟ್ಟಿಕೊಂಡು ಆ ಮೂಲಕ ಸ್ಪರ್ಧಾತ್ಮಕತೆಯ ಈ ಯುಗದಲ್ಲಿ ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿದ್ದಾರೆ.
ತಾನು ಶಿಕ್ಷಣ ಪಡೆಯುವಾಗ ಪಡೆದ ಕಷ್ಟಗಳು ತನ್ನೂರಿನ ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆಗಳಾಗಬಾರದು ಎನ್ನುವ ಉದ್ದೇಶ ಅವರದಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಾದ CET/NEET/JEE ಕೋಚಿಂಗ್ ಪಡೆಯಲು ಮಂಗಳೂರು ಬೆಂಗಳೂರು ದೂರದ ಹೊರ ಜಿಲ್ಲೆಗಳಿಗೆ ಹೋಗುವ ಬದಲು ತನ್ನ ಸ್ವಂತ ಊರಾದ ಹೆಮ್ಮಾಡಿಯಲ್ಲೆ ತನ್ನ ಕಾಲೇಜಿನಲ್ಲಿಯೇ ಅತ್ಯುತ್ತಮ ಕೋಚಿಂಗ್ ನೀಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತಿನಿತ್ಯ ತರಬೇತಿಯೂ ನಡೆಯುತ್ತಿದೆ. ಕಾಲೇಜು ಪ್ರಾರಂಭದ ಪ್ರಥಮ ವರ್ಷದಲ್ಲಿಯೇ ದ್ವಿತೀಯ ಪಿ.ಯು.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಹಾಗೂ ರಾಜ್ಯಕ್ಕೆ 6ನೇ Rank ಪಡೆದು,CET,NEET,JEE ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ
ಅತ್ಯುತ್ತಮ ಸಾಧನೆಯೊಂದಿಗೆ ಹಲವಾರು Rankಗಳನ್ನು ಪಡೆಯುವುದರ ಮೂಲಕ ಪ್ರಾರಂಭಿಕ ವರ್ಷದಲ್ಲಿಯೇ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕಾಲೇಜು ಇದಾಗಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಕಾಲೇಜು ಇತಿಹಾಸವನ್ನೇ ಸೃಷ್ಟಿ ಮಾಡಿದೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ಪ್ರಥಮ ಆದ್ಯತೆ ಯಾಗಿದೆ.
ಗಣೇಶ ಮೊಗವೀರರವರ ವಿಶೇಷ ಸಾಧನೆಗಳು :-
ನವ ದೆಹಲಿಯಲ್ಲಿ ಆಲ್ ಇಂಡಿಯಾ University ಆಯೋಜಿಸಿದ MOSPI (Ministry of Statistics and Program Implementation)
15 ದಿನಗಳ ವಿಶೇಷ ಕ್ಯಾಂಪ್ ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರತಿನಿಧಿಸಿರುತ್ತಾರೆ.
ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.
Wisdom ED & ಅಭಿಜ್ಞಾ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ಇವರು ಕೊಡಮಾಡುವ “Out standing young Faculty Award 2022″ನೀಡಿ ಗೌರವಿಸಿರುತ್ತಾರೆ.
ಪದವಿಪೂರ್ವ ಕಾಲೇಜಿನ ಕನಸು ನನಸಾಗುತ್ತಿದ್ದಂತೆ ತನ್ನದೇ ಆದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ಆರಂಭಿಸುವ ಇವರ ಕನಸು ಸಾಕಾರಗೊಳ್ಳುತ್ತಿದೆ. ಮುಂದಿನ ವರ್ಷ 2024-25ನೇ ಶೈಕ್ಷಣಿಕ ವರ್ಷದಿಂದ ನಾವುಂದ ಶುಭದಾ ಆಂಗ್ಲ ಮಾಧ್ಯಮ ಶಾಲೆಯನ್ನು ಸಮರ್ಪಣಾ ಎಜುಕೇಶನಲ್ ಟ್ರಸ್ಟ್ (ರಿ) ನೂತನ ಆಡಳಿತ ಮಂಡಳಿಗೆ ಒಳಪಟ್ಟಿದ್ದು ಗಣೇಶ ಮೊಗವೀರರವರ ಸಾರಥ್ಯದಲ್ಲಿ ವಿಶೇಷ ವಿನೂತನ ಚಟುವಟಿಕೆಗಳೊಂದಿಗೆ ಮುನ್ನಡೆಸುವ ಯೋಜನೆ ರೂಪಿಸಿಕೊಂಡಿದ್ದಾರೆ.
ಶುಭದಾ ಆಂಗ್ಲ ಮಾಧ್ಯಮ ಶಾಲೆಯ ವಿಶಿಷ್ಟತೆಗಳು
ಅತ್ಯುತ್ತಮ ಇಂಗ್ಲಿಷ್ ಸಂವಹನದ ಕಲಿಕೆಯೇ ಮೊದಲ ಆದ್ಯತೆ.
ಅತ್ಯಾಧುನಿಕವಾದ ಸೌಲಭ್ಯಗಳೊಂದಿಗೆ ಆಕರ್ಷಕವಾದ Play School.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 6ನೇ ತರಗತಿಯಿಂದ 10ನೇ ತರಗತಿಯವರೆಗೆ KAS,IAS,IPS,CET,NEET,JEE, CA/CS ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ (Foundation)ನೀಡಲಾಗುವುದು.
ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಸೇವಾ ಅನುಭವ ಹೊಂದಿರುವ ನುರಿತ ಅನುಭವಿಶಾಲಿ ಶಿಕ್ಷಕ ವೃಂದ.
ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್ ಗಳು.
ಸುಸಜ್ಜಿತವಾದ ಗಣಕಯಂತ್ರ (Computer) ಪ್ರಯೋಗಾಲಯ.
ಸುಸಜ್ಜಿತವಾದ ಶಾಲಾ ಗ್ರಂಥಾಲಯ.
ವಿಜ್ಞಾನ ವಿಷಯಕ್ಕೆ ಅನುಗುಣವಾಗಿ ಅತ್ಯಾಧುನಿಕವಾದ ಪ್ರಯೋಗಾಲಯ.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಕ್ರೀಡೆ, ಕಲೆ,ಸಾಹಿತ್ಯ ಈ ಪ್ರಮುಖ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಂಗೀತ, ಭರತನಾಟ್ಯ, ಯಕ್ಷಗಾನ, ಕರಾಟೆ,ಚೆಸ್,ಅಬಾಕಸ್, ಡ್ರಾಯಿಂಗ್ Art & Craft, ಜಾದೂ, ಗೊಂಬೆಯಾಟ,
ಸ್ಕೇಟಿಂಗ್, ಟೇಬಲ್ ಟೆನ್ನಿಸ್ , ಬಾಸ್ಕೆಟ್ ಬಾಲ್, ಕಬಡ್ಡಿ, ವಾಲಿಬಾಲ್, ಹ್ಯಾಂಡ್ ಬಾಲ್, ತ್ರೋ ಬಾಲ್ ಇತ್ಯಾಧಿ…
ಈ ಪ್ರಮುಖ ಕಲಾ ವಿಭಾಗಗಳಿಗೆ ಹಾಗೂ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಅನುಭವಿಶಾಲಿ ಶಿಕ್ಷಕರಿಂದ ಅತ್ಯುತ್ತಮ ತರಬೇತಿ ನೀಡಲಾಗುವುದು.
ವ್ಯಕ್ತಿತ್ವ ವಿಕಸನ ತರಬೇತಿ(Management Training).
ಸುಸಜ್ಜಿತವಾದ ಹಾಗೂ ಆಧುನಿಕ ಶೈಲಿಯ ಶೌಚಾಲಯಗಳು.
ಶುಚಿ-ರುಚಿಯಾದ ಮಧ್ಯಾಹ್ನದ ಊಟದ ವ್ಯವಸ್ಥೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲಾ ಬಸ್ ವ್ಯವಸ್ಥೆ.
ವಿದ್ಯಾರ್ಥಿಗಳ ಕಲಿಕಾ ಪ್ರಗತಿಗಾಗಿ ವಿಶೇಷವಾದ ಹಾಗೂ ವಿನೂತನವಾದ ಯೋಜನೆಗಳು.
ಪ್ರೀತಿಯ ಪೋಷಕರೇ ನಿಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲು ಹಾಗೂ ಅವರ ಭವಿಷ್ಯವನ್ನು ಉಜ್ವಲಗೊಳಿಸಲು
ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಆಯ್ಕೆ ನಿಮ್ಮದಾಗಲಿ.
ಬುಕ್ಕಿಂಗ್ ಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ.
8951371853, 8105451726, 9731488501.