ಬೈಂದೂರು :ದಾದರ್-ತಿರುನೆಲ್ವೇಲಿ ರೈಲು ನಿಲುಗಡೆ ಅವಕಾಶ ರೈಲ್ವೆ ಸಚಿವರಿಗೆ ಸಂಸದ ಬಿವೈಆರ್ ಧನ್ಯವಾದ

0
336

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ದಾದರ್-ತಿರುನೆಲ್ವೆಲಿ ಎಕ್ಸ್ ಪ್ರೆಸ್ ರೈಲು ಸಂಖ್ಯೆ 22629/22630 ರೈಲನ್ನು ಬೈಂದೂರು ಮೂಕಾಂಬಿಕಾ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ಅವಕಾಶ ನೀಡಿದ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಧನ್ಯವಾದನ್ನು ಹೇಳಿದ್ದಾರೆ.

Click Here

ಮೂಕಾಂಬಿಕಾ ರಸ್ತೆ ಬೈಂದೂರು ರೈಲು ನಿಲ್ದಾಣವು ಕರಾವಳಿ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡು ರಾಜ್ಯದ ಭಕ್ತರು ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಭೇಟಿ ನೀಡುವುದರಿಂದ ಕೇರಳ ಹಾಗೂ ಮುಂಬೈಗೆ ಹೋಗುವ ಹೆಚ್ಚಿನ ರೈಲುಗಳಿಗೆ ಇಲ್ಲಿ ನಿಲುಗಡೆ ನೀಡಲಾಗುತ್ತಿದೆ.

ಮೂಕಾಂಬಿಕಾ ರಸ್ತೆ ಬೈಂದೂರು ನಿಲ್ದಾಣದಲ್ಲಿ ದಾದರ್-ತಿರುನೆಲ್ವೆಲಿ ರೈಲು ನಿಲುಗಡೆಯಿಂದ ಬೈಂದೂರು ಕ್ಷೇತ್ರದ ಯಾತ್ರಾರ್ಥಿಗಳಿಗೆ ಮಧುರೈ ಮೀನಾಕ್ಷಿ, ಗುರುವಾಯೂರ್ ಮತ್ತು ಶಬರಿಮಲೈ ಅಯ್ಯಪ್ಪ ದೇವಸ್ಥಾನದಂತಹ ಇತರ ಯಾತ್ರಾ ಸ್ಥಳಗಳ ದರ್ಶನಕ್ಕೆ ಅನುಕೂಲವಾಗಲಿದೆ ಹಾಗೂ ಅಲ್ಲಿನ ಭಕ್ತಾದಿಗಳಿಗೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಬರಲು ಅನುಕೂಲವಾಗಲಿದೆ

Click Here

LEAVE A REPLY

Please enter your comment!
Please enter your name here