ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಧಾರ್ಮಿಕವಾಗಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ಭಯವೇ ಭಕ್ತಿಯ ಮೂಲ. ನಾಗ ಭಕ್ತಿಯ ಸಂಕೇತವೂ ಹೌದು, ಭಯದ ಸಂಕೇತವೂ ಹೌದು. ನಾಗಾರಾಧನೆಯನ್ನು ವಿಜ್ಞಾನದ ದೃಷ್ಟಿಯಲ್ಲಿ ನೋಡುವುದು ಬಹಳ ಅಪಾಯಕಾರಿ ಎಂದು ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರಾದ ಪ್ರತಾಪ್ ಚಂದ್ರ ಶೆಟ್ಟಿ ಹಳನಾಡು ಹೇಳಿದರು.
ಕುಂದಾಪುರ ತಾಲೂಕು ಹಳನಾಡು ಗ್ರಾಮದ ಸಮಸ್ತ ದೇವರಮನೆ ಕುಟುಂಬಸ್ಥರ ಸೇವೆಯಾಗಿ ಅರ್ಭಕಧಾರಕ, ಸಹಿತ ಸಹ ಪರಿವಾರ ಶ್ರೀ ಹೊಳ್ಳಾಡಿ ಅಮ್ಮ ದೈವಸ್ಥಾನ ಹಳನಾಡು ಇಲ್ಲಿ ನಡೆದ ಚತುಃಪವಿತ್ರ ನಾಗಮಂಡಲೊತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಪ್ರವಚನ ನೀಡಿದರು.
ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರಾದ ಪ್ರತಾಪಚಂದ್ರ ಹಳನಾಡು ಧಾರ್ಮಿಕ ಪ್ರವಚನ ನೀಡಿ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿ, ನಾಗ ಪ್ರಕೃತಿಯ ದೇವರು. ನಾಗಾರಾಧನೆಯಿಂದ ಸಂತತಿ, ಸಂಪತ್ತು, ಆರೋಗ್ಯ ಲಭಿಸುತ್ತದೆ. ಶ್ರದ್ದಾಭಕ್ತಿಯಿಂದ ನಾಗ ಆರಾಧಿಸಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ನಾಗಾರಾಧನೆಗೆ ವ್ಯಯಿಸಿದ ಸಂಪತ್ತು ವರ್ಷದೊಳಗೆ ಎರಡರಷ್ಟು ವೃದ್ಧಿಯಾಗುತ್ತದೆ ಎಂದರು.
ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಮಾತನಾಡಿ, ಪರಿಸರಸಹ್ಯವಾದ ಜೀವನ ಕ್ರಮ ನಮ್ಮದಾಗಬೇಕು. ನಾಗಾರಾಧನೆಯಲ್ಲಿಯೂ ಕೂಡಾ ಪರಿಸರದ ಮಹತ್ವಿಕೆಯಿದೆ. ಪರಿಸರವನ್ನು ರಕ್ಷಿಸುವ ಶ್ರದ್ದೆಯನ್ನು ಬೆಳೆಸಿಕೊಳ್ಳಬೇಕು. ಕೃಷಿಯನ್ನು ಉಳಿಸಿಕೊಂಡು, ಜಾನುವಾರುಗಳನ್ನು ಸಲಹಿಕೊಂಡು ಬದುಕು ನಡೆಸುವಂತಾಗಬೇಕು ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಮಾತನಾಡಿ, ಉತ್ಸವ ಬೇರೆ ಜಾತ್ರೆ ಬೇರೆ.ದೇವರಿಗೆ ನಡೆಯುವುದು ಉತ್ಸವ. ಮಂಡಲೋತ್ಸವ ದೇವರಿಗೆ ಮಾತ್ರ ನಡೆಯುವುದು.
ನಾಗಮಂಡಲೋತ್ಸವದಂತಹ ಶ್ರೇಷ್ಠ ಆರಾಧನೆಯಲ್ಲಿ ಶ್ರದ್ದೆ ಭಕ್ತಿಯಿಂದ ಪಾಲ್ಗೊಳ್ಳುವುದರಿಂದಲೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಹಳನಾಡು ದೊಡ್ಮನೆಯ ಎಚ್.ಬೋಜರಾಜ್ ಶೆಟ್ಟಿ, ಮೊಕ್ತೇಸರರಾದ ಎಚ್.ಸದಾಶಿವ ಶೆಟ್ಟಿ, ಎಚ್.ಕೆ ದೇವಾನಂದ ಶೆಟ್ಟಿ ಹಳನಾಡು, ಹೋಟೆಲ್ ಉದ್ಯಮಿ ಹರೀಶ್ ಕುಮಾರ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಪ್ರಕಾಶ್ ಶೆಟ್ಟಿ ಹಳ್ನಾಡು, ಹರಿ ಓಂ ರತ್ನಾಕರ ಶೆಟ್ಟಿ, ಮಹಾಬಲ ಶೆಟ್ಟಿ ದೇವರುಮನೆ, ಕೈಗಾರಿಕಾ ನಿಗಮದ ಬೇಳೂರು ರಾಘವೇಂದ್ರ ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಬಿ.ರಾಜೇಂದ್ರ ಕುಮಾರ್ ಬಸ್ರೂರು ಭಾಗವಹಿಸಿದ್ದರು.
ಜಿ.ಪಂ.ಮಾಜಿ ಸದಸ್ಯ ಎಚ್.ದೇವಾನಂದ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಎಚ್.ದಯಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ನಿವೃತ್ತ ಅಧ್ಯಾಪಕ ವಿಶ್ವನಾಥ ಶೆಟ್ಟಿ ವಂದಿಸಿದರು.
ಮಧ್ಯಾಹ್ನ 11.45ರಿಂದ 1-15ರ ತನಕ ಸುಗಮ ಸಂಗೀತ ಭಕ್ತಿ ಗಾಯನ, ಬಿ.ರಾಜೇಂದ್ರ ಕುಮಾರ್ ಬಸ್ರೂರು ಇವರಿಂದ. ಮಧ್ಯಾಹ್ನ 1.15ರಿಂದ 2.15ರ ತನಕ ಭಜನಾ ಗಾನ ಸಂಕೀರ್ತನ ದ್ವಂದ್ವ ಹಾಡುಗಾರಿಕೆ, ಮಧ್ಯಾಹ್ನ 2.15ರಿಂದ 3 ಗಂಟೆಯ ತನಕ ಭರತನಾಟ್ಯ-ನಾಟ್ಯಾಂಜಲಿ ಕಲಾ ನಿಕೇತನ ಬಸ್ರೂರು ಇಲ್ಲಿನ ವಿದ್ಯಾರ್ಥಿಗಳಿಂದ. ಮಧ್ಯಾಹ್ನ 3 ರಿಂದ 5 ಗಂಟೆಯ ತನಕ ಶ್ರೀದೇವಿ ಮಹಾತ್ಮೆ ಹರಿಕಥಾ ಸತ್ಸಂಗ -ಡಾ.ಎಸ್.ಪಿ ಗುರುದಾಸ್ ಮಂಗಳೂರು ಹಾಗು ಬಳಗದವರಿಂದ ಪ್ರಸ್ತುತಗೊಂಡಿತು.
ಮಾ.3ರಂದು ಆದಿತ್ಯವಾರ ಬೆಳಿಗ್ಗೆ 6.30ರಿಂದಲೇ ನಾಗಮಂಡಲೋತ್ಸವದ ಧಾರ್ಮಿಕ ಕರ್ಮಾಂಗಗಳು ಪ್ರಾರಂಭಗೊಂಡು ಸಂದರ್ಶನ, ಪಲ್ಲಪೂಜೆ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 12ರಿಂದ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 6.45ಕ್ಕೆ ರಂಗ ಪೂಜೆ ಅಷ್ಟಾವಧಾನ ಸೇವೆ, ಸಂಜೆ 7.30ಕ್ಕೆ ಹಾಲಿಟ್ಟು ಸೇವೆ, ರಾತ್ರಿ 8.30ಕ್ಕೆ ಮಂಡಲ ಪೂಜಾ, ರಾತ್ರಿ 9ರಿಂದ ಚತುಃಪವಿತ್ರ ನಾಗಮಂಡಲ ಸೇವೆ ನಂತರ ಪ್ರಸಾದ ವಿತರಣೆ, ಮಂತ್ರಾಕ್ಷತೆಯೊಂದಿಗೆ ಸಂಪನ್ನಗೊಂಡಿತು.











