ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಬಹುದಿನಗಳ ವಿವಿಧ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಶುಕ್ರವಾರ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಅಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಆಲಿಸಿದರು.
ಈ ವೇಳೆ ಮಾತನಾಡಿದ ಸ್ಥಳೀಯ ಬಿಜೆಪಿ ಮುಖಂಡ ಮಹಾಬಲ ತಿಂಗಳಾಯ ಕೋಡಿ ಗ್ರಾಮದಲ್ಲಿ ಕೃಷಿಭೂಮಿಗೆ ಸಾಕಷ್ಟು ವರ್ಷಗಳಿಂದ ಉಪ್ಪು ನೀರು ನುಗ್ಗುತ್ತಿದ್ದು ಇದಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು, ಸಾಸ್ತಾನದಿಂದ ಕೋಡಿ ಸಂಪರ್ಕಿಸುವ ರಸ್ತೆ ಅಗಲಿಕರಣ ಅಭಿವೃದ್ಧಿ ಕುರಿತು, ಕೋಡಿ ಮಹಾಸತೀಶ್ಚರಿ ದೇಗುಲ ಎದುರು ಇರುವ ಬೀಚ್ ರಸ್ತೆ ಅಭಿವೃದ್ಧಿಗೊಳಿಸುವುದು, ಸ್ಥಳೀಯ ಎರಡು ಕೊಳ ಹುಳೇತ್ತುವುದು, ಕೋಡಿ ತಲೆ ಸ್ಮಶಾನ ನಿರ್ಮಿಸುವ ಕುರಿತು,ಇಲ್ಲಿನ ಸಿಆರ್ ಝಡ್ ಸಮಸ್ಯೆ, ಕೋಡಿ ಕಡಲ್ಕೊರೆತ ಶಾಶ್ವತ ಪರಿಹಾರ ಸೇರಿದಂತೆ ಕೋಡಿ ಬಂದರು ಅಭಿವೃದ್ಧಿ ಪಡಿಸುವ ಕುರಿತು ಸಭೆಯಲ್ಲಿ ಶಾಸಕರೊಂದಿಗೆ ಚರ್ಚಿಸಿದರು.
ಶಾಸಕರ ಭರವಸೆ…
ಈ ಎಲ್ಲಾ ಸಮಸ್ಯೆಗಳ ಕುರಿತಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಅಲ್ಲದೆ ತಾತ್ಕಾಲಿಕ ಕೆಲ ಕಾಮಗಾರಿ ಕೈಗೆತ್ತಿಕೊಳ್ಳವ ಬಗ್ಗೆ ಸಭೆಯಲ್ಲಿ ಪ್ರಾಸ್ತಾಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ , ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್,ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ,ಪೂರ್ವಾಧ್ಯಕ್ಷ ಸದಸ್ಯ ಪ್ರಭಾಕರ್ ಮೆಂಡನ್, ಮುಖಂಡರಾದ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರವನ್ನು ಸುಧೀರ್ ಕುಂದರ್ ನಿರೂಪಿಸಿದರು.











