ಬ್ರಹ್ಮಾವರ: ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್”ನ `ಫ್ರೆಡ್ಡೀಸ್ ರೆಸ್ಟ್ರೋ ಕೆಫೆ’ ಶುಭಾರಂಭ

0
4853

ಕುಂದಾಪುರ ಮಿರರ್ ಸುದ್ದಿ…
ಬ್ರಹ್ಮಾವರ:
ದುಬೈನಲ್ಲಿ ಜನಪ್ರಿಯತೆ ಪಡೆದಿರುವ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನವರ ನೂತನ ಶಾಖೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್‍ನವರ ಫ್ರೆಡ್ಡೀಸ್ ರೆಸ್ಟ್ರೋ ಕೆಫೆ, ಸ್ಪೋಟ್ಸ್ ಬಾರ್ ಅ.28 ಶುಭಾರಂಭಗೊಂಡಿದೆ.


ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡದ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ರಿಷಭ್ ಶೆಟ್ಟಿ, ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ, ಮತ್ತು ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ನಟ ಪ್ರಮೋದ್ ಶೆಟ್ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸಿ ತಾರಾ ಮೆರುಗು ನೀಡಿದರು.

ಉಡುಪಿ ಶಾಸಕ ರಘುಪತಿ ಭಟ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಡೈಜಿ ವರ್ಲ್ಡ್ ಮ್ಯಾನೆಜಿಂಗ್ ಡೈರೆಕ್ಟರ್ ವಾಲ್ಟರ್ ನಂದಲಿಕೆ, ಉದ್ಯಮಿ ವಿನಯ ಕುಮಾರ ಮತ್ತು ಉದಯ ಕುಮಾರ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Click Here


ರೆಸ್ಟ್ರೋ ಕೆಫೆಗೆ ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ ವ್ಯವಸ್ಥೆಯನ್ನು ಈ ಹೋಟೆಲ್ ಹೊಂದಿದೆ. ಅತ್ಯುತ್ತಮವಾದ ಒಳಾಂಗಣ ವಿನ್ಯಾಸ, ಬಾಯಲ್ಲಿ ನೀರೂರಿಸುವ ಕರಾವಳಿ ವಿಶೇಷ ಖಾದ್ಯಗಳು, ಫ್ರೆಡ್ಡೀಸ್ ಕ್ರೀಡಾ ಪ್ರೇಮಿಗಳಿಗೆ ಬಿಗ್ ಸ್ಕ್ರೀನ್ ಮೂಲಕ ಐಸಿಸಿ ಟಿ-20 ವರ್ಲ್ಡ್ ಕಪ್ ಗಳನ್ನು ಲೈವ್‍ನಲ್ಲಿ ವೀಕ್ಷಣೆ ಮಾಡಬಹುದಾದ ವ್ಯವಸ್ಥೆಯನ್ನು ಹೊಂದಿದೆ.

ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಗಳು ದುಬೈನಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ. ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್, ಖಾಸಗಿ ಒಡೆತನದ ಹೋಟೆಲ್ ಕಂಪನಿಯಾಗಿದೆ ಮತ್ತು ಈ ಪ್ರದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಅತಿಥ್ಯ ಗುಂಪುಗಳಲ್ಲಿ ಒಂದಾಗಿದೆ. ದುಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕಂಪನಿಯು ತನ್ನ ಮೊದಲ ಹೋಟೆಲ್ ಅನ್ನು 2001ರಲ್ಲಿ ಸ್ಥಾಪಕ ಅಧ್ಯಕ್ಷರಾದ ಯಶಸ್ವಿ ಉದ್ಯಮಿ ಪ್ರವೀಣ್ ಶೆಟ್ಟಿಯವರ ಡೈನಾಮಿಕ್ ನಾಯಕತ್ವದಲ್ಲಿ ಪ್ರಾರಂಭಗೊಂಡು ನಂತರ ಫಾರ್ಚ್ಯೂನ್ ಗ್ರೂಪ್ ಅಭೂತಪೂರ್ವವಾಗಿ ವಿಸ್ತರಣೆ ಹೊಂದುತ್ತಲೇ ಇದೆ. ಇದೀಗ ಪ್ರವೀಣ್ ಶೆಟ್ಟಿಯವರ ಕನಸಿನಂತೆ ತಾಯ್ನಾಡಲ್ಲು ಈ ಸಂಸ್ಥೆ ತನ್ನ ಶಾಖೆಯನ್ನು ವಿಸ್ತರಿಸುತ್ತಿರುವುದು ಗ್ರಹಕರಿಗೆ ಸಂತಸ ನೀಡಿದೆ. ಫಾರ್ಚ್ಯೂನ್ ಗ್ರೂಪ್ಸ್ ಈಗಾಗಲೇ ದುಬೈ, ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್), ಟಿಬಿಲಿಸಿ (ಜಾರ್ಜಿಯಾ) ಮತ್ತು ಕರ್ನಾಟಕ (ಭಾರತ)ದಲ್ಲಿ ಹೋಟೆಲ್‍ಗಳನ್ನು ಹೊಂದಿದ್ದಾರೆ.

ಬಾರ್ ದುಬೈಯ ಫಾರ್ಚೂನ್ ಏಟ್ರಿಯಮ್ ಹೋಟೆಲ್ (4.ಸ್ಟಾರ್), ದುಬೈನ ಫಾರ್ಚೂನ್ ಪಾರ್ಕ್ ಹೋಟೆಲ್, ದುಬೈ ಇನ್ವೆಸ್ಟ್ಮೆಂಟ್ಸ್ ಪಾರ್ಕ್ (4 ಸ್ಟಾರ್), ಫಾರ್ಚೂನ್ ಕರಾಮಾ ಹೋಟೆಲ್, ದುಬೈ (3 ಸ್ಟಾರ್), ದುಬೈ ಗ್ರ್ಯಾಂಡ್ ಹೋಟೆಲ್ ಬೈ ಫಾರ್ಚೂನ್, ಅಲ್ ಕುಸೈಸ್, ದುಬೈ (4 ಸ್ಟಾರ್), ಫಾರ್ಚೂನ್ ಪ್ಲಾಜಾ ಹೋಟೆಲ್, ಅಲ್ ಕುಸೈಸ್, ದುಬೈ – 3 ಸ್ಟಾರ್ ಫಾರ್ಚೂನ್ ಹೋಟೆಲ್ ಡೇರಾ, ದುಬೈ(3 ಸ್ಟಾರ್), ಫಾರ್ಚೂನ್ ಪ್ಯಾಲೇಸ್ ಹೋಟೆಲ್, ಟಿಬಿಲಿಸಿ (4 ಸ್ಟಾರ್), ಉಡುಪಿಯ ಬ್ರಹ್ಮಾವರದ ಫಾರ್ಚೂನ್ ಪ್ಲಾಜಾ ಹೋಟೆಲ್ (4 ಸ್ಟಾರ್), ಕುಂದಾಪುರದ ವಕ್ವಾಡಿಯ ಫಾರ್ಚೂನ್ ವಿಲೇಜ್ ಹೋಟೆಲ್ (3 ಸ್ಟಾರ್) ಸಮೂಹ ಸಂಸ್ಥೆಗಳನ್ನು ಹೊಂದಿದೆ.

ಗ್ರಾಹಕರ ಮೆಚ್ಚಿನ ಫಾರ್ಚೂನ್: ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಗಳು ದುಬೈನಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ. ದುಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕಂಪೆನಿಯು ತನ್ನ ಮೊದಲ ಹೋಟೆಲ್ ಅನ್ನು 2001ರಲ್ಲಿ ಉದ್ಯಮಿ ಪ್ರವೀಣ್ ಶೆಟ್ಟಿಯವರು ಪ್ರಾರಂಭಿಸಿದ್ದು ಫಾರ್ಚೂನ್ ಗ್ರೂಪ್‍ ಪ್ರಸ್ತುತ ಉನ್ನತ ಸಂಸ್ಥೆಯಾಗಿದೆ. ಫಾರ್ಚೂನ್ ಸಂಸ್ಥೆ ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿಯವರ ಕನಸಿನಂತೆ ತಾಯ್ನಾಡಲ್ಲು ಈ ಸಂಸ್ಥೆ ತನ್ನ ಶಾಖೆಯನ್ನು ವಿಸ್ತರಿಸುತ್ತಿದೆ. ಲಾಭದ ಹಿತದೃಷ್ಟಿಯಲ್ಲದೆ ಅಂತರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ತನ್ನೂರಿನ ಗ್ರಾಹಕರಿಗೆ ನೀಡಲು ಸಂತಸವಿದೆ. ಕಾಲೇಜು ವಿದ್ಯಾಭ್ಯಾಸದ ಬಳಿಕ ದುಬೈಗೆ ತೆರಳಿದಾಗ ಹೋಟೆಲ್ ಉದ್ಯಮದಲ್ಲಿ ಹೊಸತನ ಕಂಡುಕೊಳ್ಳಬೇಕೆಂಬ ಹಿನ್ನೆಲೆ ಆರಂಭವಾದ ಸಂಸ್ಥೆಯಿದು ಎಂದು ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here