ರವಿ ಕಟಪಾಡಿ ಅವರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

0
854

Click Here

Click Here

ಅಶಕ್ತ, ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ಕಾರ್ಯಕ್ರಮ

ಕುಂದಾಪುರ ಮಿರರ್ ಸುದ್ದಿ..
ಕೋಟ :
ಸಮಸ್ಯೆಗಳು ಬಂದಾಗ ಎಲ್ಲರೂ ಒಂದಾಗಿ ಅದನ್ನು ಪರಿಹರಿಸಿಕೊಂಡಲ್ಲಿ ಸಂಘ ಸಂಸ್ಥೆಗಳು ಬೆಳೆಯಲು ಸಾಧ್ಯ. ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿರುವ ಪಂಚವರ್ಣ ಯುವಕ ಮಂಡಲದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟ ಪಂಚವರ್ಣ ಯುವಕ ಮಂಡಲದ ವತಿಯಿಂದ 45ನೇ ರಾಜ್ಯೋತ್ಸವ ಸಂಭ್ರಮ ಸದ್ಭಾವನಾ 2021 ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿ ಕನ್ನಡ ಭಾಷೆಗೆ ಏಳು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸಿ ಲಭಿಸಿದೆ ಇದರ ಅರ್ಥ ನಮ್ಮ ಕನ್ನಡ ಭಾಷೆ ಶ್ರೇಷ್ಠತೆಯನ್ನು ಪರಿಚಯಿಸುತ್ತದೆ ಅಲ್ಲದೆ ದೇಶದಲ್ಲೆ ವಿಶೇಷವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಕೋಟ ಜನತಾ ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಕುಂದರ್ ಯುವ ಪೀಳಿಗೆಯಲ್ಲಿ ಕನ್ನಡ ಬಳಕೆಯ ಕಾರ್ಯ ಕಡಿಮೆ ಆಗುತ್ತಿದೆ. ಕನ್ನಡದ ಬಗ್ಗೆ ಕೀಳರಿಮೆ ಬಿಟ್ಟು, ಕನ್ನಡದಲ್ಲಿ ಓದುವ, ಬರೆಯುವ ಮತ್ತು ವ್ಯವಹರಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಾಜಸೇವಕ ರವಿ ಕಟಪಾಡಿ ಅವರಿಗೆ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸನ್ಮಾನ/ಗೌರವ : ಇದೇ ಸಂದರ್ಭ ಕಾರ್ತಟ್ಟು ಚಿತ್ರಪಾಡಿಯ ಅಘೋರೇಶ್ವರ ಕಲಾರಂಗಕ್ಕೆ ಪಂಚವರ್ಣ ವಿಶೇಷ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಕ್ತದಾನಿ ದಿನೇಶ್ ಬಾಂಧವ್ಯ, ಮೆಸ್ಕಾಂನ ಉಮ್ಮರ್ ಸಾಹೇಬ್, ಪೆÇಲೀಸ್ ಪ್ರಶಾಂತ್ ಪಡುಕೆರೆ ಮತ್ತು ಖೇಲೋ ಇಂಡಿಯಾ ಕ್ರೀಡಾಪಟು ಸಾತ್ವಿಕ್ ಕೊಮೆ ಅವರನ್ನು ಗೌರವಿಸಲಾಯಿತು. ಮಣೂರು ದಿ.ಉದಯ ಪೂಜಾರಿ ಸ್ಮರಣಾರ್ಥ ಆರೋಗ್ಯ ನಿಧಿ ವಿತರಣೆ ಮತ್ತು ಮಣಿಪಾಲದ ಸರಳಬೆಟ್ಟು ಅನಾಥಾಶ್ರಮಕ್ಕೆ ಅಕ್ಕಿ, ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಒರ್ವ ಬಡ ವಿದ್ಯಾರ್ಥಿಯನ್ನು ಶೈಕ್ಷಣಿಕ ದತ್ತು ಪಡೆಯಲಾಯಿತು.ಪಂಚವರ್ಣ ಯುವಕ ಮಂಡಲದ ನೂತನ ಲಾಂಛನ ಈ ಸಂದರ್ಭದಲ್ಲಿ ಅನಾವರಣಗೈಯಲಾಯಿತು.

Click Here

ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ.ರಮೇಶ್ ರಾವ್ ಶುಭಾಶಂಸನೆಗೈದರು,ವಿವೇಕ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ ನಾವಡ ಆಶಯದ ನುಡಿಗಳನ್ನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ, ರಾಜ್ಯ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ವಿಠಲ ಪೂಜಾರಿ ಐರೋಡಿ, ಉದ್ಯಮಿ ಜಯರಾಜ್ ವಿ ಶೆಟ್ಟಿ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಬ್ರಾಯ ಆಚಾರ್ಯ,ಜಿ. ಸತೀಶ್ ಹೆಗ್ಡೆ, ಉಡುಪಿ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಗಾಣಿಗ ಮಾಲ್ತಾರ್, ಸಂಘದ ಸ್ಥಾಪಕ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಸಂಘದ ಗೌರವಾಧ್ಯಕ್ಷ ಸತೀಶ್ ಎಚ್ ಕುಂದರ್ , ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ನಿತಿನ್ ಕುಮಾರ್ ವರದಿ ವಾಚಿಸಿದರು. ಸಂಘದ ಗೌರವ ಸಲಹೆಗಾರ ಚಂದ್ರ ಆಚಾರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಘದ ಸಂಚಾಲಕ ಅಜಿತ್ ಆಚಾರ್ಯ ನಿರೂಪಿಸಿದರು.ಸದಸ್ಯ ಮಂಜುನಾಥ್ ಭಂಡಾರಿ ವಂದಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.ರಾಘವೇಂದ್ರ ತುಂಗ ಸಹಕರಿಸಿದರು.ನಂತರ ಸಾಲಿಗ್ರಾಮ ಚಿತ್ರಪಾಡಿಯ ಈಶ ಲಾಸ್ಯ ನೃತ್ಯ ತಂಡದವರಿಂದ ನೃತ್ಯ ವೈಭವ ಮತ್ತು ಪ್ರಸಿದ್ಧ ಯಕ್ಷಕಲಾವಿದರಿಂದ ಚಂದ್ರಾವಳಿ ವಿಲಾಸ ಯಕ್ಷಗಾನ ನಡೆಯಿತು.

Click Here

LEAVE A REPLY

Please enter your comment!
Please enter your name here