ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹಠಾತ್ ಅಗುಲುವಿಕೆ ಇಂದ ಇಡೀ ರಾಜ್ಯದ ಅಭಿಮಾನಿಗಳನ್ನು ದುಃಖ ಸಾಗರದಲ್ಲಿ ತಳ್ಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡಬಿಮಾನ ಡಾ. ರಾಜ್ ಸಂಘಟನೆ ವತಿಯಿಂದ ದೀಪಗಳನ್ನು ಬೆಳಗಿಸಿ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.




ಹೊಸ ಬಸ್ ನಿಲ್ದಾಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸಂಘಟನೆ ಅಧ್ಯಕ್ಷರಾದ ರತ್ನಾಕರ ಪೂಜಾರಿ ಅವರು ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಪ್ಪುವನ್ನು ಹಠಾತ್ ನಿರ್ಗಮನ ನಮಗೆ ಒಡ ಹುಟ್ಟಿದ ಸಹೋದರನನ್ನೇ ಕಳೆದು ಕೊಂಡನಂತಹ ಶೂನ್ಯ ಭಾವ ಆವರಿಸಿದಂತಾಗಿದೆ. ಇಂತಹ ಹೃದಯವಂತ ಮಾನವೀಯ ಮಹಾ ಚೇತನಾ ಮರೆಯಾಗಿದ್ದು ಆ ನೋವನ್ನು ವ್ಯಕ್ತಪಡಿಸಲು ಯಾವ ಪದಗಳಿಗೂ ಅಸಾಧ್ಯ ಎಂದರು.
ಈ ಸಂದರ್ಭದಲ್ಲಿ ಭಾಗವಹಿಸಿದ ಅಪ್ಪು ಅಭಿಮಾನಿಗಳು ಕಂಬನಿ ಮಿಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯ ಕಬ್ಬಡಿ ಆಟಗಾರ ತನ್ವಿರ್ ಕುಂದಾಪುರ,. ಸುನಿಲ್ ಖಾರ್ವಿ ತಲ್ಲೂರು, ಶ್ರೀಧರ್ ಗಾಣಿಗ, ಪ್ರಭಾಕರ್ ಖಾರ್ವಿ, ಅಗಸ್ಟಿನ್ ಡಿಸೋಜ, ಮಝರ್ ಕುಂದಾಪುರ, ಸಂತೋಷ್ ಕುಂದೇಶ್ವರ, ಗಾಳಿ ಮಾಧವ ಖಾರ್ವಿ, ಡುಂಡಿರಾಜ್, ಕಿಶನ್ ಖಾರ್ವಿ, ನವೀನ್ ಕುಮಾರ್, ನಾರಾಯಣ ಗಾಣಿಗ, ನಾಗರಾಜ್ ಖಾರ್ವಿ, ಸೂರ್ಯ ದೇವಾಡಿಗ, ಶಿವರಾಜ್ ಖಾರ್ವಿ, ಗುರು ಖಾರ್ವಿ, ಪ್ರಸಾದ್ ಗಾಣಿಗ ಕೊಡಿ ಹಾಗೂ ಮುಂತಾದವರು ಭಾಗವಹಿಸಿ ನುಡಿನಮನಗಳನ್ನು ಅರ್ಪಿಸಿದರು.
ಬಸ್ ನಿಲ್ದಾಣದಲ್ಲಿ ಆಗಮಿಸಿದ ಪ್ರಯಾಣಿಕರು ಸಹ ದೀಪವನ್ನು ಹಿಡಿದು ಶ್ರದ್ಧಾಂಜಲಿ ಅರ್ಪಿಸಿದ್ದು ವಿಶೇಷವಾಗಿತ್ತು.











