ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತಂಬಾಕು ಉತ್ಪಾದನೆಯಲ್ಲಿ ಭಾರತ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿದೆ ಎಂಬ ಸರಕಾರಿ ವರದಿ ಆತಂಕಕಾರಿ, 15 ವರ್ಷ ಮೇಲ್ಪಟ್ಟವರ ಪೈಕಿ ಶೇ.28ರಷ್ಟು ಮಂದಿ ಮಾದಕ ವ್ಯಸನಿಗಳಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಳು, ಹೆಣ್ಮಕ್ಕಳು ಒಳಗೊಂಡಿರುವುದು ಕಳವಳಕಾರಿ ಎಂದು ಕುಂದಾಪುರ ಪ್ರಧಾನ ಸಿವಿಲ್ ನ್ಯಾಯಾಧೀಶೆ, ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮಂಜುಳಾ ಬಿ. ಹೇಳಿದರು.
ಶುಕ್ರವಾರ ಕೋಟೇಶ್ವರದಲ್ಲಿರುವ ಕುಂದಾಪುರ
ರೂರಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಗ ಪೊಲೀಸ್ ಇಲಾಖೆ, – ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿ ಕೊಂಡ ವಿಶ್ವ ತಂಬಾಕು ನಿಷೇಧ ದಿನಾಚರಣೆ ಮತ್ತು ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ 66ಲಕ್ಷ ಮಂದಿ ತಂಬಾಕು ಸೇವನೆಯ ಕಾರಣಕ್ಕೆ ಮರಣವನ್ನಪ್ಪುತ್ತಿದ್ದಾರೆ. ಪ್ರತಿ 6 ಸೆಕೆಂಡಿಗೆ 1 ಜೀವ ಹಾನಿ ಆಗುತ್ತಿದೆ. ಇಷ್ಟೊಂದು ಘಾತಕ ಪರಿಣಾಮ ಹೊಂದಿರುವ ತಂಬಾಕಿನ ಬಗ್ಗೆ ಎಚ್ಚರ ವಹಿಸಬೇಕು, ಬೀಡಿ, ಸಿಗರೇಟು ಸೇವಿಸುವವರು ತಾವು ನಾಶ ಆಗುವುದಲ್ಲದೆ ಪರಿಸರಕ್ಕೆ ಹೊಗೆ ಬಿಟ್ಟು ಇತರರ ಬದುಕಿಗೂ ಕಂಠಕ ಆಗುತ್ತಿದ್ದಾರೆ. ಯುವಜನರು ದುಶ್ಚಟದಿಂದ ಸಂಪೂರ್ಣ ಹೊರಬೀಳಲೇಬೇಕು ಎಂದು ಅವರು ಎಚ್ಚರಿಸಿದರು.
ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ರಾಜು ಎನ್. ಉದ್ಘಾಟಿಸಿ ಮಾತನಾಡಿ, 1987ರಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಜಾರಿಗೆ ಬಂತು. ಅಲ್ಲಿಂದ ಇಲ್ಲಿಯ ತನಕ ತಂಬಾಕು ನಿಷೇಧ ಸಂಬಂಧಿತ ಕಾನೂನಿನ ಅರಿವು ನೀಡುವ ಕೆಲಸ ನಡೆಯುತ್ತಲೆ ಇದೆ. ಆದರೆ ತಂಬಾಕು
ಉತ್ಪಾದಿಸುವವರು ಕೇವಲ ತಮ್ಮ ಲಾಭಕ್ಕಾಗಿ ಇಡಿ ನಾಗರಿಕ ಸಮಾಜವನ್ನು ದುರ್ಬಲಗೊಳಿಸುತ್ತಿದ್ದಾರೆ. ಜೀವನ ಮತ್ತು ಆರೋಗ್ಯ ಹಾಳು ಮಾಡುವ ತಂಬಾಕುವಿನಿಂದ ನಾಗರಿಕ ಸಮಾಜ ದೂರವುಳಿಯಬೇಕು ಎಂದು ಅವರು ಹೇಳಿದರು.
ವಕೀಲರ ಸಂಘ ಅಧ್ಯಕ್ಷ ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಸರಕಾರಿ ಅಭಿಯೋಜಕ ಉದಯಕುಮಾರ್, ಪ್ರೊಬೆಷನರಿ ಡಿವೈಎಸ್ಪಿ ಗೀತಾ ಪಾಟೀಲ್, ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ ಗಿಳಿಯಾರು, ಕುಂದಾಪುರ ರೂರಲ್ ಆಯು ರ್ವೇದ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಪ್ರದೀಪ ಶೆಟ್ಟಿ, ವೈಸ್ ಪ್ರಿನ್ಸಿಪಾಲ್ ಡಾ.ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಸುಷ್ಮಾ ಪ್ರಾರ್ಥಿಸಿದರು. ರೂರಲ್ ಆಯರ್ವೇದ ಮೆಡಿಕಲ್ ಕಾಲೇಜೀನ ಪ್ರಿನ್ಸಿಪಾಲ್ ಡಾ| ಪ್ರಸನ್ನ ಐತಾಳ ಸ್ವಾಗತಿಸಿದರು. ಡಾ.ಪರೀಕ್ಷಿತ್ ನಾವಡ ನಿರ್ವಹಿಸಿದರು. ಡಾ.ಸವಿತಾ ಭಟ್ ವಂದಿಸಿದರು.











