ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಬೈಲೂರು ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಅಗತ್ಯವಾದ ಉತ್ತಮ ಮೂಲಭೂತ ಸೌಕರ್ಯ ಇದೆ. ಇದನ್ನು ಪೋಷಕರು ಸದುಪಯೋಗ ಮಾಡಿಕೊಳ್ಳ ಬೇಕು ಎಂದು ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಮೂಡುಬೈಲೂರು ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇಲ್ಲಿ ನಡೆದ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮುದಾಯ ಮತ್ತು ಹಳೆವಿದ್ಯಾರ್ಥಿ ಸಂಘದ ಸಹಾಯದಿಂದ ಶಾಲೆಗೆ ಅತೀ ಅಗತ್ಯವಾದ ಮೂಲಭೂತ ಸೌಕರ್ಯಗಳಾದ ಇಂಟರ್‌ನೇಟ್, ಪ್ರತಿ ತರಗತಿಗೆ ಸ್ಮಾರ್ಟ್ ಟಿ ವಿ., ಕಂಪ್ಯೂಟರ್ ಲ್ಯಾಬ್ ಮುಂತಾದ ಆಧುನಿಕ ಕಲಿಕ ಸೌಕರ್ಯಗಳ ಜೊತೆಗೆ ಪ್ರತಿಭಾವಂತ ಶಿಕ್ಷಕರನ್ನು ಒದಗಿಸಿದ್ದು ಮಕ್ಕಳನ್ನು ಹೆಚ್ಚಿನ ಸಂಖೈಯಲ್ಲಿ ಶಾಲೆಗೆ ದಾಖಲಿಸಿಸುವುದರ ಮೂಲಕ ಪೋಷಕರು ಈ ಮೂಲಭೂತ ಸೌಕರ್ಯಗಳ ಪ್ರಯೋಜನ ಪಡೆಯಬೇಕು” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಆಶಾಲತಾ ಶಿವರಾಮ ಶೆಟ್ಟಿಯವರು. ದೂರದಿಂದ ಶಾಲೆಗೆ ಬರುವ ಮಕ್ಕಳಿಗೆ ಸಾರಿಗೆ ವೆಚ್ಚಕ್ಕಾಗಿ ರೂಪಾಯಿ ಹತ್ತು ಸಾವಿರದ ಚೆಕ್ ನ್ನು ಮುಖ್ಯಶಿಕ್ಷಕರಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಶೋಭಾ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಪಂಚಾಯತ್ ಸದಸ್ಯರಾದ ಶ್ರೀಮತಿ ಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆ ಆಶಾಲತಾ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಖಜಾಂಚಿ ಸುಧಾಕರ ಬೈಲೂರು ಸರಕಾರಿಂದ ಕೊಡಮಾಡಿದ ಉಚಿತ ನೋಟ್ ಪುಸ್ತಕವನ್ನು ಮಕ್ಕಳಿಗೆ ವಿತರಿಸಿದರು.
ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಬಲೂನ್ ನೀಡಿ ಮೆರವಣಿಗೆಯಲ್ಲಿ ಕರೆತರಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ ಸ್ವಾಗತಿಸಿದರು. ಸಹಶಿಕ್ಷಕ ಆನಂದ ಕುಲಾಲ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಸಂಧ್ಯಾ ಕೆ ವಂದಿಸಿದರು. ಗೌರವ ಶಿಕ್ಷಕಿಯರಾದ ಪ್ರಮೀಳಾ, ವಿಶಲಾಕ್ಷಿ, ವೈಶಾಲಿ ಶೆಟ್ಟಿ ಮತ್ತು ನಯನ ಪಠ್ಯ ಪುಸ್ತಕ ವಿತರಣೆಗೆ ಸಹಕರಿಸಿರು.











