ಸೌಕೂರಿನಲ್ಲಿ ಗೋಶಾಲೆ ಮಾಡುವ ಚಿಂತನೆ – ಬಿ.ಎಂ. ಸುಕುಮಾರ ಶೆಟ್ಟಿ

0
1067

Click Here

Click Here

ಸೌಕೂರು ದೇವಸ್ಥಾನದಲ್ಲಿ ಗೋಪೂಜೆ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೀಪಾವಳಿಯ ಪ್ರಯುಕ್ತ ಗೋಪೂಜಾ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು. ಗೋಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೋಗ್ರಾಸ ನೀಡಿದ ಕ್ಷೇತ್ರದ ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ ಸರ್ಕಾರದ ಆದೇಶದಂತೆ ಮುಜರಾಯಿ ಇಲಾಖೆಯ ಅದೀನದ ದೇವಸ್ಥಾನಗಳಲ್ಲಿ ಗೋಪೂಜೆ ನೆರವೇರಿಸಲಾಗುತ್ತದೆ. ಗೋ ಸಾಕ್ಷಾತ್ ದೇವರು. ಗೋಪೂಜೆ ಮಾಡುವ ಸತ್ಕ್ರರ್ಮ ಎಲ್ಲರಲ್ಲಿಯೂ ಬೆಳೆಯಬೇಕು. ಗೋಹತ್ಯೆಯನ್ನು ನಿಯಂತ್ರಿಸಬೇಕು, ಗೋಗಳ ರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಸೌಕೂರಿನಲ್ಲಿ ಗೋಶಾಲೆ ಮಾಡುವ ಯೋಜನೆ ರೂಪಿಸಿ, ಸ್ಥಳದ ಕೊರತೆಯಿದ್ದರೆ ಸರ್ಕಾರಿ ಸ್ಥಳವನ್ನು ನೀಡಲು ಚಿಂತನೆ ನಡೆಸಲಾಗುವುದು ಎಂದರು.

Click Here


ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜಯ್ಯ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅನಂತ ಅಡಿಗ ಸೌಕೂರು ಕುಪ್ಪ ಗುಲ್ವಾಡಿ, ರೀತಾ ದೇವಾಡಿಗ ಸೌಕೂರು, ಆಶಾ ಸಂತೋಷ್ ಪೂಜಾರಿ ಮುಕ್ಕೋಡು ನೇರಳಕಟ್ಟೆ, ಜಯರಾಮ ಶೆಟ್ಟಿ ಹಡಾಳಿ, ಅಂಪಾರು, ಕೆ.ಸುಬ್ಬಣ್ಣ ಶೆಟ್ಟಿ ಕೆಂಚನೂರು, ಉಮೇಶ ಮೊಗವೀರ ಕಂಡ್ಲೂರು, ಜಿ.ಶೇಖರ ಪೂಜಾರಿ ಗುಲ್ವಾಡಿ ಹಾಗೂ ರಘುರಾಮ ಶೆಟ್ಟಿ, ದೇವಳದ ಅರ್ಚಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here