ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತೀ ವರ್ಷ ಆಚರಿಸಲ್ಪಡುವ ಸಾಂಪ್ರದಾಯಿಕ ಗೋಪೂಜಾ ಕಾರ್ಯಕ್ರಮವನ್ನು ಗುಂಡ್ಮಿ ಗ್ರಾಮದ ದೊಡ್ಮನೆ ಬೆಟ್ಟು ರಾಮ ಮಧ್ಯಸ್ಥರ ಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳಂತೆ ಆಚರಿಸಲಾಯಿತು.
ಪೂಜಾ ವಿಧಿಯನ್ನು ಮಲ್ಲಿಕಾ ಶ್ರೀರಾಮ ಮದ್ಯಸ್ಥರು ನೆರವೇರಿಸಿದರು.
ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್ ಹಾಗೂ ಸದಸ್ಯರು ಗೋಮಾತೆಗೆ ಶಾಲು ಹೊದಿಸಿ ಅವಲಕ್ಕಿ, ಬೆಲ್ಲ, ಬಾಳೆಹಣ್ಣು ಹಾಗು ಪಶುಆಹಾರವನ್ನು ತಿನ್ನಿಸಿ ನಮಸ್ಕರಿಸಿ ಗೋ ಪೂಜೆಯ ದಿನದ ಶುಭ ಹಾರೈಕೆ ಸಲ್ಲಿಸಿದರು.
ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಟರಾಜ್ ಹೂಳ್ಳ,ಪದಾಧಿಕಾರಿಗಳಾದ ಬಾಲಕೃಷ್ಣ ಪೂಜಾರಿ ,ಶ್ರೀನಿವಾಸ್ ಅಮೀನ್, ರವೀಂದ್ರ ಕಾಮತ್, ಬಸವರಾಜ್, ದಿನೇಶ್ ಬಂಗೇರಾ, ಶ್ರೀನಿವಾಸ್ ಶೆಟ್ಟಿಗಾರ್, ರತ್ನಾಕರ್ ಶ್ರೀಯಾನ್, ಮಂಜುನಾಥ್ ಪೂಜಾರಿ, ಪದ್ಮನಾಭ ಶೆಟ್ಟಿಗಾರ್, ಜನಾರ್ಧನ ಶೆಟ್ಟಿಗಾರ್ ಉಪಸ್ಥಿತರಿದ್ದರು.











