ಕುಂದಾಪುರ :ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ವತಿಯಿಂದ ಮೊಳಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ.1.60 ಲಕ್ಷ ಮೌಲ್ಯದ ಉಚಿತ ನೋಟ್ ಪುಸ್ತಕಗಳ ವಿತರಣೆ

0
725

Click Here

Click Here

ಕುಂದಾಪುರ :ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್(ರಿ.) ಇವರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಳಹಳ್ಳಿ ಜೂ.15ರಂದು ಸರ್ಕಾರಿ ಶಾಲಾ ಮಕ್ಕಳಿಗೆ ‘ವಿದ್ಯಾರತ್ನ’ ಯೋಜನೆಯ ಮೂಲಕ ಒಂದು ವರ್ಷದ ರೂ. 1.60 ಲಕ್ಷ ಮೌಲ್ಯದ ಉಚಿತ ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮವನ್ನು ಜಯಶೀಲ ಶೆಟ್ಟಿ ನಿವೃತ್ತ ತೋಟಗಾರಿಕಾ ಇಲಾಖೆಯ ನಿರ್ದೇಶಕರು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ತೆಗೆದ 20 ವಿದ್ಯಾರ್ಥಿಗಳಿಗೆ ರೂ.1.40 ಲಕ್ಷ ರೂಗಳ ವಿದ್ಯಾರ್ಥಿ ವೇತನವನ್ನು ವಿತರಿಸಿ, ಒಬ್ಬ ಬಡ ವಿದ್ಯಾರ್ಥಿನಿಯ ಎರಡು ವರ್ಷಗಳ ಪಿಯುಸಿಯ ಸಂಪೂರ್ಣ ಖರ್ಚು ವೆಚ್ಚದ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ಟ್ರಸ್ಟ್ ನ ಪ್ರವರ್ತಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆ ತಿಳಿಸಿ, ನೆರೆದ ಜನತೆಗೆ ಮಾದರಿಯಾದರು.

Click Here

ಕಾರ್ಯಕ್ರಮದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಅರುಣ್ ಹೆಗ್ಡೆ ಉಪಾಧ್ಯಕ್ಷರು ಹೊಂಬಾಡಿ ಮಂಡಾಡಿ , ಶಾಲಾ ಮುಖ್ಯ ಶಿಕ್ಷಕರಾದ ಗೋವಿಂದ, ಟ್ರಸ್ಟ್ ನ ಸದಸ್ಯರಾದ ಸಂತೋಷ್ ಕಾಂಚನ್ ಹಾಗೂ ಟ್ರಸ್ಟ್‌ನ ಪ್ರಾಜೆಕ್ಟ್ ಮ್ಯಾನೇಜರ್ ಗಿರೀಶ್ ಎಂ ಎನ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ಗಣೇಶ್ ಪಿ ಶೆಟ್ಟಿ ನಿರೂಪಿಸಿ. ಶಾಲಾ ಶಿಕ್ಷಕಿಯಾದ ಶೋಭಾ ಸಿ ಶೆಟ್ಟಿ ಸ್ವಾಗತಿಸಿ, ಪದವೀಧರ ಶಿಕ್ಷಕರಾದ ಆದರ್ಶ ವಂದಿಸಿದರು.

Click Here

LEAVE A REPLY

Please enter your comment!
Please enter your name here