ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೋಡಿ ಹೊಸಬೇಂಗ್ರೆ ಸಹಿತ ವಿವಿಧ ಕಡಲ್ಕೊರೆತ ಸ್ಥಳಗಳಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಕಡಲ್ಕೊರೆತ ಸ್ಥಳಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಶಾಸಕರು ಎಲ್ಲೆಲ್ಲಿ ಕಡಲ್ಕೊರೆತ ನಡೆದಿದೆ ಆ ಸ್ಥಳಗಳ ಬಗ್ಗೆ ಸರಕಾರದ ಸಚಿವರ ಗಮನ ಸೆಳೆದು ಸಮಸ್ಯೆ ಕ್ರಮಕೈಗೊಳ್ಳಲು ಶ್ರಮಿಸುವುದಾಗಿ ವಿವರಿಸಿದರು.
ಕಡಲ ಕಿನಾರೆ ಬಳಿ ರೆಸಾರ್ಟ್ ಶಾಸಕರ ಕೆಂಗಣ್ಣು
ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಡಲಕಿನಾರೆಯಲ್ಲಿ ತಲೆ ಎತ್ತಿದ ರೆಸಾರ್ಟ್‍ಗಳ ಬಗ್ಗೆ ಮಾಹಿತಿ ಪಡೆದ ಶಾಸಕರು ಕಿನಾರೆಯ ರಸ್ತೆಯ ಅಂಚಿನಲ್ಲಿ ಕಂಪೌಂಡ್ ನಿರ್ಮಾಣದ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಿದರು ಕಳೆದ ವರ್ಷ ಇದೇ ಸ್ಥಳಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಎಲ್ಲಾ ರೆಸಾರ್ಟ್‍ಗಳ ಬಗ್ಗೆ ಮಾಹಿತಿ ಪಡೆದು ಸ್ಥಳೀಯಾಡಳಿತಕ್ಕೆ ಎಚ್ಚರಿಕೆ ಪಾಠ ಮಾಡಿದ್ದು ನೆನಪಿಸಬಹುದಾಗಿದೆ
ಈ ಸಂದರ್ಭದಲ್ಲಿ ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ,ಸದಸ್ಯರಾದ ಕೃಷ್ಣ ಪೂಜಾರಿ.ಪಿ,ಸತೀಶ್ ಜಿ ಕುಂದರ್ ,ಮೀನುಗಾರ ಮುಖಂಡರಾದ ಲಕ್ಷ್ಮಣ್ ಸುವರ್ಣ, ಮಹಾಬಲ ಕುಂದರ್ ,ಸುಧೀರ್ ಕುಂದರ್,ರಾಘವೇಂದ್ರ ಸುವರ್ಣ,ಮಾಜಿ ಉಪಾಧ್ಯಕ್ಷ ಅಣ್ಣಪ್ಪಕುಂದರ್,ಮೀನುಗಾರಿಕಾ ಇಲಾಖೆಯ ಸಹಾಯಕ ಇಂಜಿನಿಯರ್ ಡಯಾಸ್ ,ಭಾನುಪ್ರಕಾಶ ಮತ್ತಿತರರು ಉಪಸ್ಥಿತರಿದ್ದರು.











