ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವಿದ್ಯಾರ್ಥಿ ಜೀವನದ ಬದುಕು ಹಸನಾಗಲು ಪ್ರಾಮಾಣಿಕ ಪರಿಶ್ರಮ ಅತ್ಯಗತ್ಯ. ನಿಮ್ಮ ಭವಿಷ್ಯದ ಜೀವನ ಹಸನಾಗಲು ಅಕ್ಕರೆಯ ಓದು ನಿಮ್ಮದಾಗಲಿ ಎಂದು ಮನೋವೈದ್ಯೆ ಡಾ. ಮಹಿಮಾ ಆಚಾರ್ಯ ಅಭಿಮತಿಸಿದರು
ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಪ್ರೌಢಶಾಲಾ ವಿಭಾಗದಲ್ಲಿ ನಡೆದ ತಮ್ಮ ಅಜ್ಜ ನೇರಂಬಳ್ಳಿ ಪ್ರಭಾಕರ ಆಚಾರ್ಯ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರದಲ್ಲಿ ಎಸ್ ಎಸ್ ಎಲ್ ಸಿ ಸಾಧಕರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು
ಮುಖ್ಯ ಅಥಿತಿಗಳಾಗಿ ದೀಪಕ್ ಬುಕ್ ಹೌಸ್ ನ ರಘುರಾಮ್ ಉಡುಪ ಅವರು ಮಕ್ಕಳ ಏಳಿಗೆಗೆ ಅವರೇ ಶಿಲ್ಪಿಗಳು ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪ ಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ನಮ್ಮ ಮಕ್ಕಳ ಸಾಧನೆ ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಪ್ರೇರಕ ಶಿಕ್ಷಕರನ್ನು, ಪ್ರತಿಭಾ ಪ್ರೋತ್ಸಾಹಕ ಗಣ್ಯರನ್ನು ಅಭಿನಂದಿಸಿದರು
ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮೂವತ್ತೆಳು ವಿದ್ಯಾರ್ಥಿಗಳಿಗೆ ನೇರಂಬಳ್ಳಿ ಪ್ರಭಾಕರ ಆಚಾರ್ಯ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಶಸ್ತಿ ಪತ್ರಗಳೊಂದಿಗೆ ತಲಾ ಎರಡು ಸಾವಿರದಂತೆ ಒಟ್ಟು ಸುಮಾರು 74,000 ರೂಪಾಯಿಯ ನಗದು ನೀಡಿ ಪುರಸ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ ಎರ್ಮಾಳ್ ಜನಾರ್ಧನಯ್ಯ ಅವರ ಹೆಸರಿನಲ್ಲಿ ಸುಮಾರು 43 ವರ್ಷಗಳಿಂದ ಕೊಡ ಮಾಡಿದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೊಡಮಾಡುವ ನಗದು ಪುರಸ್ಕಾರ ಹಾಗೆ ದೀಪಕ್ ಬುಕ್ ಹೌಸ್ ಮಾಲೀಕರಾದ ರಘುರಾಮ್ ಉಡುಪ ಇವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮದ ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿದ್ಯಾರ್ಥಿಗಳಿಗೆ ಕೊಡ ಮಾಡುವ ನಗದು ಪುರಸ್ಕಾರ ವನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಾದ ಅನಿಲ್ ಲೋಬೋ ಸ್ಕಂದ ಪ್ರಥಮ್ ವಿದ್ಯಾ ಕೃತಿ ತಮ್ಮ ಸಾಧನೆಯ ಹಾದಿಯ ಪಯಣವನ್ನು ಪರಿಚಯಿಸಿ
ಕಿರಿಯ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಪೋಷಕರು ಮಾತನಾಡಿ ತಮ್ಮ ಮಕ್ಕಳ ಸಾಧನೆಗೆ ಒತ್ತಾಸೆಯಾಗಿ ನಿಂತ ಶಿಕ್ಷಕ ರ ಪರಿಶ್ರಮವನ್ನು ಪ್ರಶಂಸಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭಕ್ಕೆ ಸರ್ವರನ್ನು ಶಿಕ್ಷಕಿ ದಿವ್ಯಪ್ರಭ ಸ್ವಾಗತಿಸಿದರು. ಶಿಕ್ಷಕಿ ಅನುರಾಧ ವಂದಿಸಿದರು. ಶಿಕ್ಷಕಿ ಸುಧಾಭಾಯಿ ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ರಮಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರು, ಸಿಬ್ಬಂದಿ ವರ್ಗ ,ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.











