ಬೈಂದೂರು :ವಿದ್ಯಾರ್ಥಿಗಳಿಂದ ಶಕ್ತಿಶಾಲಿ ದೇಶವೊಂದರ ನಿರ್ಮಾಣ ಸಾಧ್ಯ- ಯು,ಟಿ ಖಾದರ್

0
118

Click Here

Click Here

ಉಡುಪಿ ಜಿಲ್ಲೆಯ 350 ಸರ್ಕಾರಿ/ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 41,000 ಜತೆ ಉಚಿತ ಶಾಲಾ ಸಮವಸ್ತ್ರಗಳ ವಿತರಣೆ

ಹೆಗ್ಗುಂಜೆ ರಾಜೀವ್ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿ ರಘುರಾಮ ಶೆಟ್ಟಿ ಅವರಿಗೆ ಪ್ರದಾನ

ಕುಂದಾಪುರ ಮಿರರ್ ಸುದ್ದಿ….
ಬೈಂದೂರು :ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಂದ ಶಕ್ತಿಶಾಲಿ ದೇಶವೊಂದರ ನಿರ್ಮಾಣ ಸಾಧ್ಯ. ಸಮಾಜಕ್ಕೆ ಸ್ಪಂದಿಸುವ ಸೇವಾ ಮನೋಭಾವದ ಎಚ್.ಎಸ್ ಶೆಟ್ಟಿಯವರಂತಹವರು ನಿಜವಾದ ದೇಶಪ್ರೇಮಿಗಳು ಎಂದು ರಾಜ್ಯ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬೈಂದೂರಿನ ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಮತ್ತು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ ಜುಲೈ 6ರ ಬೈಂದೂರು ಯಡ್ತರೆಯ ಜೆ.ಎನ್.ಆರ್.ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ 350 ಸರ್ಕಾರಿ/ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 41,000 ಜತೆ ಉಚಿತ ಶಾಲಾ ಸಮವಸ್ತ್ರಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಡನಾಗಿ ಹುಟ್ಟಬಹುದು ಆದರೆ ಸಾಯುವ ತನಕ ಬಡವನಾಗಿಯೇ ಇರಬೇಕಾಗಿಲ್ಲ. ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. ಶಿಕ್ಷಣ ಕ್ಷೇತ್ರವೊಂದೇ ವ್ಯಕ್ತಿಗಳನ್ನು ಅತ್ಯಂತ ಶಕ್ತಿಶಾಲಿಗಳನ್ನಾಗಿ ರೂಪಿಸಲು ಸಾಧ್ಯ. ಜೀವನದಲ್ಲಿ ಛಲ, ಹಠ, ಗುರಿ ಇದ್ದರೆ ಯಶಸ್ಸು ಗಳಿಸಲು ಸಾಧ್ಯ. ಎಚ್.ಎಸ್ ಶೆಟ್ಟಿಯವರಂತಹ ವ್ಯಕ್ತಿಗಳು ಸಹಕಾರ ನೀಡುತ್ತಾರೆ ಎಂದರು.

ಹಣ ಇದ್ದವರು ತುಂಬಾ ಮಂದಿ ಇದ್ದಾರೆ. ಅದನ್ನು ಅರ್ಪಣಾ ಮನೋಭಾವದಿಂದ ನೀಡುವವ ಸಂಖ್ಯೆ ಕಡಿಮೆ. ವಿದ್ಯಾರ್ಥಿಗಳೆಲ್ಲರೂ ಕೂಡಾ ಹೆಚ್.ಎಸ್ ಶೆಟ್ಟಿಯವರಂಥ ಸ್ಥಾನಕ್ಕೆರುವ ಗುರಿ ಹಾಕಿಕೊಳ್ಳಬೇಕು. ಜೀವನದಲ್ಲಿ ಗುರಿ ಎನ್ನುವುದು ಅತೀ ಮುಖ್ಯ. ಉತ್ತಮ ಗುರಿಯಿಂದ ಯಶಸ್ಸು ಜೀವನದಲ್ಲಿ ಸಾಧ್ಯ ಎಂದರು.

Click Here

ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡುತ್ತಾ 2008ರಲ್ಲಿ ಟ್ರಸ್ಟ್ ರಚನೆ ಮಾಡಲಾಯಿತು. ಆಗ 1500 ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲಾಯಿತು. ಈಗ 41 ಸಾವಿರ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುತ್ತಿದ್ದೇವೆ. ಕಳೆದ ವರ್ಷ 7 ಕೋಟಿ ರೂಪಾಯಿಯನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿದ್ದೇವೆ. ಆರ್ಥಿಕವಾಗಿ ತೀರಾ ಕಷ್ಟದಲ್ಲಿರುವ ಕೊರಗ ಕುಟುಂಬಗಳಿಗೆ 100 ಮನೆಗಳನ್ನು ಕಟ್ಟಕೊಡುವ ಯೋಜನೆ ಇದೆ. ಈಗಾಗಲೆ 14 ಮನೆಗಳ ನಿರ್ಮಾಣವಾಗುತ್ತಿದೆ. 5 ವರ್ಷದಲ್ಲಿ ಉಳಿದ 86 ಮನೆಗಳ ನಿರ್ಮಾಣ ಮಾಡಲಾಗುವುದು. 150 ಶಾಲೆ, ಪಿಯು ಕಾಲೇಜುಗಳಲ್ಲಿ ಐಐಟಿ ಕೋಚಿಂಗ್ ಕೌನ್ಸಲಿಂಗ್ ನೀಡುವ ಕೆಲಸ ಆಗಸ್ಟ್‍ನಿಂದ ಆರಂಭವಾಗುತ್ತದೆ. ಎಂದರು.

ಇದೇ ವೇಳೆ ಹೆಗ್ಗುಂಜೆ ರಾಜೀವ್ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿಯನ್ನು ಹಿರಿಯ ಶಿಕ್ಷಕರು ಹಾಗೂ ಯಕ್ಷಗಾನ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.

ಶಾಸಕರಾದ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭಶಂಸನೆ ಗೈದು ಸ್ವಾತಂತ್ರ್ಯ ಪೂರ್ವದಲ್ಲಿ 9%ದಷ್ಟು ಸಾಕ್ಷರತೆ ಪ್ರಮಾಣ ಇದ್ದರೆ ಈಗ 85%ಕ್ಕಿಂತ ಹೆಚ್ಚು ಸಾಕ್ಷರತ ಪ್ರಮಾಣ ಇದ್ದರೂ ಕೂಡಾ ಅಪರಾಧ ಪ್ರಮಾಣ ಸ್ವಾತಂತ್ರ್ಯಪೂರ್ವಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ. ನಮಗೆ ಇವತ್ತು ಗುಣಮಟ್ಟದ ಶಿಕ್ಷಣ, ಜೀವನಮೌಲ್ಯಯುತ ಶಿಕ್ಷಣ ಸಿಗುವಂತಾಗಬೇಕು ಎಂದರು.

ಶಾಸಕರಾದ ಯಶ್‍ಪಾಲ್ ಸುವರ್ಣ, ಎ. ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ಮೊಳಹಳ್ಳಿ ದಿನೇಶ ಹೆಗ್ಡೆ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಗಣಪತಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಟ್ರಸ್ಟ್ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಡಾ.ಸುಮನಾ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯು.ಟಿ ಖಾದರ್ ಅವರನ್ನು ಅಭಿನಂದಿಸಲಾಯಿತು. ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಪತ್ರಕರ್ತ ಜಯಶೇಖರ ಮಡಪ್ಪಾಡಿ ಸನ್ಮಾನ ಪತ್ರ ವಾಚಿಸಿದರು.

ರಮಣಿ ಪ್ರಾರ್ಥನೆ ಮಾಡಿದರು. ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ರಾಜೀವ ಶೆಟ್ಟಿ ವಂದಿಸಿದರು. ಉಪನ್ಯಾಸಕ ಅಕ್ಷಯ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here