ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಾಡೋಜ ಡಾ| ಜಿ. ಶಂಕರ ಅವರಿಂದ ಪುನರ್ ನಿರ್ಮಾಣಗೊಂಡ ಉಮಾರಮಾ ಸಹಿತ ಶ್ರೀ ಕ್ಷೇತ್ರ ಹೊಳೆಶಂಕರನಾರಾಯಣದಲ್ಲಿ ನ. 5ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶನದ ಮೇರೆಗೆ ಗೋ ಪೂಜೆ ಜರಗಿತು.
ಗೋ ಪೂಜೆಯಲ್ಲಿ ಕ್ಷೇತ್ರದ ಆರ್ಚಕರು, ಆಡಳಿತ ಮಂಡಳಿ, ಅಭಿವೃದ್ಧಿ ಮಂಡಳಿ ಹಾಗೂ ಭಕ್ತರು ಪಾಲ್ಗೊಂಡರು.










