ಕುಂದಾಪುರ ಮಿರರ್ ಸುದ್ದಿ…
ಕೋಟ:ಕೋಟ ಬ್ಲಾಕ್ ಕಾಂಗ್ರೆಸ್ ಮತ್ತು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ ಸಾಲಿಗ್ರಾಮದ ಬ್ಲಾಕ್ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೊಟ್ಯಾನ್ ರಾಜಕೀಯ ಎನ್ನುವುದು ಕೇವಲ ಒಂದು ದಿನಕ್ಕೆ ಸೀಮಿತವಾಗಿರುವುದಲ್ಲ ಸದಾ ಜನರೊಂದಿಗೆ ಬೆರೆಯುವಂತಹದ್ದು. ಕೋಟ ಬ್ಲಾಕ್ ಕಾಂಗ್ರೆಸ್ ಸಹ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿ ಜನರೊಂದಿಗೆ ನಿಕಟ ಸಂಪರ್ಕ ಇರಿಸಿಕೊಳ್ಳುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾತನಾಡಿ ದೀಪಾವಳಿ ಹಬ್ಬ ಸೇರಿದಂತೆ ಎಲ್ಲ ಹಬ್ಬಗಳನ್ನು ನಾವು ಸೌಹಾರ್ಧಯುತವಾಗಿ ಆಚರಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಎಲ್ಲ ಜಾತಿ ಧರ್ಮವನ್ನು ಸಮಾನಾಗಿ ಕಾಣುವ ಪಕ್ಷವಾಗಿದ್ದು, ಎಲ್ಲರ ಭಾವನೆಯನ್ನು ಗೌರವಿಸುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಟರಾಜ್ ಹೊಳ್ಳ, ಅಭಿಜಿತ್ ಪೂಜಾರಿ, ವಿಕಾಸ್ ಹೆಗ್ದೆ, ಸುನಿಲ್ ಮಡಿವಾಳ, ರೋಶನಿ ಒಲಿವೆರಾ, ಮೋಸೆಸ್ ರೋಡ್ರಿಗಸ್, ಡೆರಿಕ್ ಡಿಸೋಜಾ, ಬಾಲಕೃಷ್ಣ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ರವೀಂದ್ರ ಕಾಮತ್ ಉಪಸ್ಥಿತರಿದ್ದರು.
ಫಲಿತಾಂಶ :ಗೂಡುದೀಪ ಸ್ಫರ್ಧೆಯಲ್ಲಿ ಅಜಿತ್ ಶೆಟ್ಟಿ ಪ್ರಥಮ, ಅಶೋಕ್ ಪಡುಬಿದ್ರೆ ದ್ವಿತೀಯ ಮತ್ತು ಪುನೀತ್ ಅಮೀನ್ ತೃತೀಯ ಬಹುಮಾನ ಪಡೆದರು. ಸುರೇಶ್ ಆಚಾರ್ ಚೇಂಪಿ, ನಾಗೇಂದ್ರ ಕೋಟ ಮತ್ತು ವಿಘ್ನೇಶ್ ಕಿಣಿ ಸಮಾಧಾನಕರ ಬಹುಮಾನ ಗಳಿಸಿದರು.











