ಕಾರ್ಕಡ – ನೆರೆ ಹಾನಿಯ ಬಗ್ಗೆ ಶಾಶ್ವತ ಪರಿಹಾರ ಬೇಡಿಕೆಗೆ ಆಗ್ರಹಿಸಿ ರೈತರು, ಗ್ರಾಮಸ್ಥರಿಂದ ಪ್ರತಿಭಟನೆ

0
213

Click Here

Click Here

Video:

ಕುಂದಾಪುರ ಮಿರರ್ ಸುದ್ದಿ…

Click Here

ಕೋಟ: ಕಾರ್ಕಡ ಬಡಾಹೋಳಿಯ ಕೃಷಿ ಭೂಮಿ ಮತ್ತು ಮನೆಗಳು ಪ್ರತಿ ಮಳೆಗಾಲದಲ್ಲಿ ಸಣ್ಣ ಮಳೆಗೂ ಜಲಾವೃತ್ತವಾಗುತ್ತಿದೆ. ಈ ಬಾರಿ ಸುಮಾರು 20 ಕ್ಕೂ ಹೆಚ್ಚು ಮನೆ ಜಲಾವೃತ್ತವಾಗಿದ್ದು, ನೂರು ಎಕ್ರೆ ಕೃಷಿ ಪ್ರದೇಶ ನಾಶವಾಗಿದೆ ನೆರೆ ಹಾವಳಿಯಿಂದ ಮುಕ್ತಿಗೊಳಿಸಿ ಕೃಷಿ ಕಾಯಕಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿ ಎಂದು ಕಾರ್ಕಡ ರೈತ ಮುಖಂಡ ರಮೇಶ್ ಮೆಂಡನ್ ಆಗ್ರಹಿಸಿದರು

ಕಾರ್ಕಡದಲ್ಲಿ ನೆರೆ ಹಾವಳಿ ತುತ್ತಾದ ಕೃಷಿ ಭೂಮಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿ
ಚಿತ್ರಪಾಡಿ ವ್ಯಾಪ್ತಿಯ 60 ಎಕ್ರೆ ಕೃಷಿ ಭೂಮಿ ಇನ್ನೂ ಕೂಡ ನಾಟಿ ಮಾಡುವ ಸ್ಥಿತಿ ಸಾಧ್ಯವಾಗಿಲ್ಲ.ಈ ಭಾಗದಲ್ಲಿ ಹಿರೇ ಹೊಳೆ ಎನ್ನುವ ಹೊಳೆಯಲ್ಲಿ ಹೂಳು ತುಂಬಿದ್ದೇ ಈ ಸಮಸ್ಯೆಗೆ ಕಾರಣ. ಚಿತ್ರಪಾಡಿಯಿಂದ ಹೋಗುವ ಹೊಳೆ ನೀರು ಸರಾಗವಾಗಿ ಹರಿಯಲು ಅಲ್ಲಲ್ಲಿ ಇರುವ ದಿಬ್ಬಗಳು ತಡೆಯಾಗಿದೆ. ಸುಮಾರು 12 ವರ್ಷದ ಹಿಂದೆ ಒಮ್ಮೆ ಹೂಳು ತೆಗೆದ ಪರಿಣಾಮ ಸುಮಾರು ಐದು ವರ್ಷಗಳ ಕಾಲ ಯಾವುದೇ ನೆರೆ ಸಮಸ್ಯೆ ಇರಲಿಲ್ಲ. ಇದೀಗ ಐದಾರು ವರ್ಷದಿಂದ ಮತ್ತೆ ನೆರೆ ಸಮಸ್ಯೆ ಉಂಟಾಗಿದೆ.ಪ್ರಸ್ತುತ ಬಂದ ನೆರೆ ಅನೇಕ ಮನೆ ಮತ್ತು ಕೃಷಿ ಭೂಮಿ ಜಲಾವೃತ್ತವಾಗಿದೆ, ಇನ್ನೊಂದು ದೊಡ್ಡ ಆತಂಕವೇನೆಂದರೆ ಕೋಟ ಸೈಬ್ರಕಟ್ಟೆ ರಸ್ತೆಯ ಬನ್ನಾಡಿಯಲ್ಲಿ ಮಂಗಳವಾರ ರಸ್ತೆ ಸಂಪರ್ಕ ಬಂದ್ ಮಾಡುವ ಮಟ್ಟದಲ್ಲಿ ನೀರು ಹರಿಯುತ್ತಿತ್ತು. ಈಗಾಗಲೇ ಅಲ್ಲಿ ಕಿರು ಸೇತುವೆ ನಿರ್ಮಾಣವಾಗುತ್ತಿದೆ. ಅದು ಮುಂದಿನ ವರ್ಷ ಪೂರ್ಣಗೊಂಡರೆ ಅದರ ಮೂಲಕ ನೀರು ಬಂದರೆ ಈಗ ಬರುವ ನೀರಿನ ಪ್ರಮಾಣದ 5 ಪಟ್ಟು ಹೆಚ್ಚಾಗಲಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಚಿತ್ರಪಾಡಿ ಮತ್ತು ಕಾರ್ಕಡ ಕೃಷಿ ಭೂಮಿಗೆ ನುಗ್ಗಿದಲ್ಲಿ ಅದರ ಹಾನಿಯ ಪ್ರಮಾಣ ಬಲು ದೊಡ್ಡದು ಖಂಡಿತ
.ಚಿತ್ರಪಾಡಿಯಿಂದ ಕಾವಡಿ ಹೊಳೆಯವರೆಗೂ ಹೂಳು ಎತ್ತಿ ನೀರು ಹರಿಯಲು ಅವಕಾಶವಾಗುವ ಕ್ರಿಯಾ ಯೋಜನೆ ಮಾಡಿ, ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ಕಾನೂನಿನ ಅಡಿಯಲ್ಲಿ ಸಂಬಂಧಪಟ್ಟ ಇಲಾಖೆಯು ಆದಷ್ಟು ಬೇಗ ಕಾರ್ಯಸೂಚಿ ರಚಿಸಿ ಸಮಸ್ಯೆಗೆ ಪರಿಹರಿಸಿ ಕಂಡುಕೊಳ್ಳಬೇಕಾಗಿ ಚಿತ್ರಪಾಡಿ ಮತ್ತು ಕಾರ್ಕಡ ಬಡಾಹೋಳಿ ರೈತರು ಹಾಗೂ ಗ್ರಾಮಸ್ಥರ ಆಗ್ರಹ.ಅಲ್ಲದೇ ಕಾರ್ಕಡ ಕಾವಡಿ ರಸ್ತೆಯಿಂದ ಹಿರೇ ಹೊಳೆ ಸಂಪರ್ಕದ ಕಲ್ಸಂಕ ತೋಡು ದಾಖಲಾತಿಯಲ್ಲಿ 12 ಅಡಿ ಅಗಲವಿದ್ದು ಇದೀಗ ಕೆಲವೆಡೆ ತೋಡು ಮುಚ್ಚಿ ಹೋಗಿ ನೀರು ಹರಿಯುತ್ತಿಲ್ಲ. ಇದರ ಗಡಿ ಗುರುತಿಸಿ ಅತಿಕ್ರಮಣ ತೆರವು ಮಾಡಿ ಕೊಡಬೇಕು. ಅಲ್ಲದೇ ಬಡಾಹೋಳಿ ರಸ್ತೆಗೆ ಹರಿಜನ ಕಾಲೋನಿ ರಸ್ತೆ ಎನ್ನುವ ಹೆಸರಿದ್ದರೂ ಅಲ್ಲಿರುವ ದಲಿತ ಸಮುದಾಯದ ಯಾವ ಮನೆಗೂ ರಸ್ತೆ ಸಂಪರ್ಕ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗೆ ತಾವು ತಮ್ಮ ಇಲಾಖೆಯ ವತಿಯಿಂದ ವರದಿ ತಯಾರಿಸಿ ಸಂಬಂಧ ಪಟ್ಟ ಇಲಾಖೆಗೆ ನೀಡಿ ಪರಿಹಾರ ಕ್ರಮ ಕೈಗೊಳ್ಳಿಎಂದು ಆಗ್ರಹಿಸಿದರು.
ಇದೇ ವೇಳೆ ಕಾರ್ಕಡ ವಿವಿಧ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್ ಇವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ರೈತರಾದ ಚಿತ್ರಪಾಡಿ ಕಾರ್ಕಡ ಬಡಾಹೋಳಿ , ಉಮೇಶ್ ಹೆಬ್ಬಾರ್, ಕೇಶವ ನೈರಿ, ಪರಮೇಶ್ವರ್ ಭಟ್, ಅಚ್ಚುತ್ ಪೂಜಾರಿ, ಶಿವರಾಮ್ ಕಾರಂತ್, ಶ್ರೀನಿವಾಸ ಕಾರಂತ್, ಕೃಷ್ಣ ಬಡಾಹೋಳಿ, ಗಣೇಶ್ ಕೆ, ಸುಧೀಂದ್ರ ಐತಾಳ್, ರಾಜ, ಚಂದ್ರ ಕೆ, ಗೋಪಿ ಮರಕಾಲ, ಪದ್ದು, ಕಮಲ ವಿಜಯ ನೈರಿ , ಅರುಣ್ ಸತ್ಯ, ಮಂಜ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here