ಕುಂದಾಪುರ ಮಿರರ್ ಸುದ್ದಿ…
ಕೋಟ: ಇತ್ತೀಚೆಗೆ ವಯೋನಿವೃತ್ತಿ ಹೊಂದಿರುವ ಸಹಕಾರ ಇಲಾಖೆ ಕುಂದಾಪುರ ಉಪವಿಭಾಗದಲ್ಲಿ ಸಹಾಯಕ ನಿಬಂಧಕರಾಗಿ ಸೇವೆ ಸಲ್ಲಿಸಿದ ಅರುಣ್ ಕುಮಾರ್ ಎಸ್. ವಿ. ಇವರನ್ನು ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘ ಸಾಸ್ತಾನ ಇದರ ವತಿಯಿಂದ ಸಂಘದ ಕಛೇರಿಯಲ್ಲಿ ಶನಿವಾರ ಸನ್ಮಾನಿಸಲಾಯಿತು.
ಸನ್ಮಾನಿತರು ತಮ್ಮ ಸೇವಾವಧಿಯ ಅನುಭವಗಳನ್ನು ಹಂಚಿಕೊಂಡರು.
ಸಭೆಯ ಅಧ್ಯಕ್ಷತೆ ವಹಿಸಿಕೊಂಡ ಸಂಘದ ಅಧ್ಯಕ್ಷ ಬಿ. ಸುರೇಶ ಅಡಿಗ ಇವರು ಸನ್ಮಾನಿತರ ಸೇವಾವಧಿ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಸಂಘದ ಸಿ.ಇ.ಓ ವಿಜಯ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಅರುಣ್ ಕುಮಾರ್ ಬಗ್ಗೆ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಿದರು.
ಸಂಘದ ನಿರ್ದೇಶಕರಾದ ಶ್ರೀಧರ ಪಿ.ಎಸ್ ಅರುಣ್ ಕುಮಾರ್ ಸಾಧನೆ ಕುರಿತು ಹಲವಾರು ವಿಷಯಗಳನ್ನು ತಿಳಿಸಿದರು.
ಸಭೆಯಲ್ಲಿ ನಿರ್ದೇಶಕರಾದ ರಮೇಶ ಕಾರಂತ್, ಉಪಾಧ್ಯಕ್ಷ ಗೋವಿಂದ ಪೂಜಾರಿ, ನಿರ್ದೇಶಕರಾದ ಆನಂದ ಗಾಣಿಗ, ಚಂದ್ರಮೋಹನ, ಲೀಲಾವತಿ ಗಂಗಾಧರ್, ಶೇಖರ ಗದ್ದೆಮನೆ, ವಿಜಯ ಪೂಜಾರಿ, ಕಿರಣ್ ಥೋಮಸ್ ಡಾಯಸ್, ಕುಮಾರಿ ಪ್ರೀತಿ, ಜ್ಯೋತಿ ಸೂರ್ಯ ಪೂಜಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಂಘದ ಸಹಾಯಕ ಪ್ರಬಂಧಕ ಕೇಶವ ಆಚಾರ್ ಕಾರ್ಯಕ್ರಮ ನಿರೂಪಿಸಿ ಶಾಖಾ ಪ್ರಬಂಧಕ ಸುರೇಶ ಪೂಜಾರಿ ವಂದಿಸಿದರು.











