ಕಾಲುಸಂಕ ನಿರ್ಮಾಣ ಅನುದಾನಕ್ಕೆ ಶಾಸಕರ ಬೇಡಿಕೆಗೆ ಸರ್ಕಾರದ ಸಕಾರಾತ್ಮಕ ಸ್ಪಂದನೆ

0
199

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಗೊಂಡ ಕಾಲುಸಂಕ ಕಾಮಗಾರಿಗಳನ್ನು ಮುಂದುವರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ ಅವರು ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ.

Click Here

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಲೋಕೋಪಯೋಗಿ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ಉಡುಪಿ ಜಿಲ್ಲೆ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ ಜಿಲ್ಲಾ ರಸ್ತೆ ಸೇತುವೆಗಳು – ಬಂಡವಾಳ ವೆಚ್ಚದಡಿ ಪಶ್ಚಿಮ ಘಟ್ಟ ಪ್ರದೇಶ ಗಳಲ್ಲಿ ಹ್ಯಾಮ್ಲೆಟ್ ಗಳಿಗೆ ಸಂಪರ್ಕ ಯೋಜನೆಯಡಿ 7 ಪ್ಯಾಕೇಜ್ ಗಳಲ್ಲಿ ಒಟ್ಟು 23 ಕಾಲುಸಂಕ ನಿರ್ಮಾಣ ಕಾಮಗಾರಿಗೆ 5 ಕೋಟಿ ರೂ.ಗಳಿಗೆ ಅನುಮೋದನೆ ಗೊಂಡಿದೆ. ಅವುಗಳಲ್ಲಿ 20 ಲಕ್ಷ ಮೊತ್ತದ ಒಂದು ಕಾಮಗಾರಿ ಪೂರ್ಣಗೊಂಡಿದ್ದು. ಉಳಿದಂತೆ 480 ಲಕ್ಷಗಳ 6 ಪ್ಯಾಕೇಜ್ ಕಾಮಗಾರಿ ಗಳು ಪ್ರಾರಂಭವಾಗದಿರುವ ಕಾಮಗಾರಿ ಗಳಾಗಿರುವುದರಿಂದ ಆರ್ಥಿಕ ಇಲಾಖೆ ಇದರ ಕಾಮಗಾರಿ ಗಳನ್ನು ತಡೆ ಹಿಡಿದಿದೆ. ಪ್ರಸಕ್ತ ಸಾಲಿನಲ್ಲಿರ ಈ ಲೆಕ್ಕ ಶೀರ್ಷಿಕೆಯಡಿ ಒದಗಿಸಿರುವ ಅನುದಾನವನ್ನು ಹಂಚಿಕೆ ಮಾಡಲಾಗಿದ್ದು, ಸದರಿ ಹಂಚಿಕೆಯಾದ ಅನುದಾನದಲ್ಲಿ ಮುಂದುವರೆದ ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಿಕೊಂಡು ಬಾಕಿ ಉಳಿಯುವ ಅನುದಾನದಲ್ಲಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪರಿಶೀಲಿಸಲಾಗುವುದು ಎಂದರು.

ಕಾಲುಸಂಕ ನಿರ್ಮಾಣ ಕಾಮಗಾರಿ ವೇಗವಾಗಿ ಸಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ತುರ್ತಾಗಿ ಈ ಕಾಮಗಾರಿಗಳಿಗೆ ಅನುದಾನ ಒದಗಿಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಒತ್ತಾಯಿಸಿದರು.

Click Here

LEAVE A REPLY

Please enter your comment!
Please enter your name here