ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಅಂಪಾರು ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯು ಕಳೆದ ಒಂದು ವರ್ಷದಿಂದ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ನೇತೃತ್ವದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಭಾರತೀಯ ಸಂಸ್ಕೃತಿಯ ಪರಿಚಯ ಹಾಗೂ ಅನೇಕ ಸಹಪಠ್ಯ ಚಟುವಟಿಕೆಗಳ ತರಬೇತಿ ನೀಡುತ್ತಾ ಸುತ್ತ ಮುತ್ತಲಿನ ಪರಿಸರದ ಮಕ್ಕಳಿಗೆ ಕೈಗೆಟುಕುವ ಶುಲ್ಕದಲ್ಲಿ ಗಗನ ಕುಸುಮವಾದ ಉತ್ತಮ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಾ ಬಂದಿದೆ.
ಜುಲೈ 22ರಂದು ಸಂಸ್ಥೆಯಲ್ಲಿ ಗುರುಪೂರ್ಣಿಮೆ ಆಚರಣೆಯನ್ನು ಅರ್ಥಪೂರ್ಣವಾಗಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗಿತ್ತು. ಪುಟಾಣಿಗಳು ಸಂತರು , ಗುರುಗಳ ಪೋಷಾಕು ಧರಿಸಿ, ಗುರುವಿನ ಮಹತ್ವ, ಗುರುಪೂರ್ಣಿಮೆಯ ಅರ್ಥವನ್ನು ಭಾಷಣ, ನೃತ್ಯ, ಹಾಡುಗಳು ಮೂಲಕ ಪ್ರಸ್ತುತ ಪಡಿಸಿದರು.
ಶಾಲಾ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಮಾತನಾಡಿ ಶಿಕ್ಷಕರು ತಮ್ಮ ವೃತ್ತಿ ಜೀವನಕ್ಕೆ ನ್ಯಾಯ ಒದಗಿಸಲು ಅನೇಕ ತ್ಯಾಗ ಮಾಡಿರುತ್ತಾರೆ ಅವರಿಗೆ ಗೌರವ, ಪ್ರೀತಿ,ಆದರ ತೋರುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿ ಪುರಾಣ ಪ್ರಸಿದ್ಧ ಗುರು ಶಿಷ್ಯರ ಕಥೆ ಹೇಳುವ ಮೂಲಕ ಗುರುವಿನ ಮಹಿಮೆ ತಿಳಿಸಿದರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಆಶೀರ್ವಾದ ಪಡೆಯುವ ಮೂಲಕ ಆಚರಣೆಗೆ ಮತ್ತಷ್ಟು ಮೆರಗು ನೀಡಿದರು. ಟ್ರಸ್ಟ್ ನ ಅಧ್ಯಕ್ಷರಾದ ಬಲಾಡಿ ಸಂತೋಷ ಕುಮಾರ ಶೆಟ್ಟಿ, ನಿರ್ದೇಶಕರು ಉಪಸ್ಥಿತರಿದ್ದರು.











