ಕುಂದಾಪುರ ಮಿರರ್ ಸುದ್ದಿ…
ಕೋಟ: ಸ್ನೇಹ ಜೀವಿ, ಸಮಾಜಸೇವಕ, ಸದಾ ರೋಗಿಗಳ ಸೇವೆಯಲ್ಲಿ ನಿರತರಾಗಿರುವ, 2021ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಲಿಗ್ರಾಮದ ಡಾ. ಸುಧಾಕರ್ ಇವರನ್ನು ವಿವೇಕ ವಿದ್ಯಾಸಂಸ್ಥೆಗಳ ವತಿಯಿಂದ ಅಭಿನಂದಿಸಿ, ಗೌರವಾರ್ಪಣೆಯನ್ನು ಸಮರ್ಪಿಸಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಕೆ. ಜಗದೀಶ ನಾವಡ,ಕೆ. ಜಗದೀಶ ಹೊಳ್ಳ,ಭಾಸ್ಕರ ಆಚಾರ್ಯ,ವೆಂಕಟೇಶ ಉಡುಪ ಹಾಗು ಉಪನ್ಯಾಸಕರಾದ ಸಂಜೀವ.ಜಿ ,ಮಂಜುನಾಥ ಉಪಾಧ್ಯ,ಶಿಕ್ಷಕರಾದ ಪ್ರೇಮಾನಂದ ಇವರು ಉಪಸ್ಥಿತರಿದ್ದರು.











