ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ,ಕುಂದಾಪುರ ಇದರ ಸಂಯುಕ್ತ ಆಶ್ರಯದಲ್ಲಿ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ “ಕನ್ನಡ ಜಾನಪದ ರಾಜ್ಯೋತ್ಸವ” ಕಾರ್ಯಕ್ರಮ ನೆರವೇರಿತು.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ಡಾ . ಗಣೇಶ್ ಗಂಗೊಳ್ಳಿ ಗೀತಗಾಯನದೊಂದಿಗೆ -” ಜನಪದರು ಕುರಿತು ಓದಿದವರಾಗಿರದೆ ಮೌಖಿಕವಾಗಿ ಬಳಸಿ ಉಳಿಸಿ ಬೆಳೆಸಿದವರು ಜನಪದ ನಿತ್ಯ ನೂತನವಾಗಬೇಕು” ಎಂದು ಪ್ರಾಸ್ತಾವಿಕವಾಗಿ ನುಡಿದರು.
ಸಮಾರಂಭದ ಮುಖ್ಯ ಅತಿಥಿಗಳಾದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ದೋಮ ಚಂದ್ರಶೇಖರ್ ಇವರು “ಜನಪದರು ಸುಶಿಕ್ಷಿತರು ಎನ್ನುವುದಕ್ಕಿಂತ ಮೌಖಿಕವಾಗಿ ತಮ್ಮ ಅನುಭವವನ್ನು ಬಿತ್ತಿ ಬೆಳೆಸಿದವರು. ಮಾತೃಭಾಷೆ ಹಾಗೂ ಜಾನಪದವನ್ನು ನಾವೆಲ್ಲ ಪೋಷಿಸಿ ಕಿರಿಯ ತಲೆಮಾರಿಗೆ ಕೊಂಡೊಯ್ಯಬೇಕು” ಎಂದು ನುಡಿದರು. ಸಮಾರಂಭದಲ್ಲಿ ಆಂಗ್ಲ ಬಳಸದೆ ಕನ್ನಡ ಮಾತನಾಡುವ ಕನ್ನಡಾಭಿಮಾನಿ ಸಂದೀಪ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಅಬ್ದುಲ್ ರೆಹಮಾನ್ ತಮ್ಮ ಅಧ್ಯಕ್ಷೀಯ ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕನ್ನಡ ಜಾನಪದ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷರಾದ ಉದಯ ಕುಮಾರ್ ಬಿ ಹಾಯ್ಕಾಡಿ, ಕುಂದಾಪುರ ತಾಲೂಕು ಕನ್ನಡ ಜಾನಪದ ಪರಿಷತನ ಪದಾಧಿಕಾರಿಗಳಾದ ಚಂದ್ರ, ಶಿಕ್ಷಕರು ಚೇತನ ಪ್ರೌಢಶಾಲೆ, ಜಯರಾಮ ಮುಖ್ಯ ಮುಖ್ಯಶಿಕ್ಷಕರು ಪೆರ್ಡೂರು, ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸಿದ್ಧಪ್ಪ ಕೆ. ಎಸ್, ಡಿ. ಎಡ್ ಪ್ರಾಂಶುಪಾಲೆ ಡಾ. ಪಿರ್ದೋಸ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಮೀರ್, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ , ಹಾಜಿ ಮೊಹಿದ್ದೀನ್ ಬ್ಯಾರಿ ಕನ್ನಡ ಅನುದಾನಿತ ಪ್ರೌಢಶಾಲೆ ಮುಖ್ಯೋಪಾದ್ಯಾಯಿನಿ ಶ್ರೀಮತಿ ಜಯಂತಿ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ದುರ್ಗಿ ಪಟಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಕನ್ನಡ ಅನುದಾನಿತ ಪ್ರೌಢಶಾಲೆ ಮುಖ್ಯೋಪಾದ್ಯಾಯಿನಿ ಜಯಂತಿ ಸರ್ವರನ್ನು ಸ್ವಾಗತಿಸಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ವಂದಿಸಿದರು. ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು











