ಕುಂದಾಪುರ ಮಿರರ್ ಸುದ್ದಿ…
ಕೋಟ:ಸ್ಟೈಲೋ ಡ್ಯಾನ್ಸ್ ಗ್ರೀವ್ ಹಾಗೂ ಗಾನ ನಿನಾದ ಆರ್ಕೆಸ್ಟ್ರಾ ಇದರ ಸಹಯೋಗದೊಂದಿಗೆ ನೃತ್ಯ ಹಾಗೂ ಕರೋಕೆ ಕ್ಲಾಸ್ ಉದ್ಘಾಟನಾ ಸಮಾರಂಭ ಭಾನುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮ್ರಗೋಡು ಇಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಭವಾನಿ ಬಿಲ್ಡರ್ಸ್ ಅಂಬಾಗಿಲು ಉಡುಪಿ ಇದರ ಮಾಲಿಕ ಪ್ರಶಾಂತ್ ಕುಮಾರ್ ಸಂಗೀತ ಎನ್ನುವುದು ಎಲ್ಲಾ ಕಲಾವಿದನಲ್ಲೂ ಕಾಣಬಹುದು ಆದರೆ ಅದನ್ನು ಮೈಗೂಡಿಸಿಕೊಂಡು ಇತರರಿಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುವುದು ಎಲ್ಲವುದಕ್ಕಿಂತ ಶ್ರೇಷ್ಠವಾದದ್ದು ಈ ನಿಟ್ಟಿನಲ್ಲಿ ಇಲ್ಲಿನ ಈ ಸಂಸ್ಥೆ ಒಂದು ಹೆಜ್ಜೆ ಮುಂದೆ ಇರಿಸಿ ಇತರ ಕಲಾವಿದರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಶುಭಹಾರೈಸಿದರು.
ಕಾರ್ಯಕ್ರಮವನ್ನು ಸಮಾಜಸೇವಕ ಉದಯಕುಮಾರ್ ಶೆಟ್ಟಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮ್ರಗೋಡು ಎಸ್ಡಿಎಂಸಿ ಪೂರ್ವ ಅಧ್ಯಕ್ಷ ಅನಂತ್ ಕುಮಾರ್, ಹಳೆ ವಿದ್ಯಾರ್ಥಿ ರಾಜೇಶ್ ಶೆಟ್ಟಿ ,ಒಡಿಸಿ ನೃತ್ಯಗಾರ್ತಿ ರೂಪಶ್ರೀ,ಹಂದಾಡಿ ಪಂಚಾಯತ್ ಸದಸ್ಯ ಶೀನಾ ಪೂಜಾರಿ, ಸಂಗೀತ ತರಬೇತುದಾರ ವಿದ್ಯಾಶ್ರೀ ಆಚಾರ್ಯ, ಯಡ್ತಾಡಿ ಡ್ಯಾನ್ಸ್ ತರಬೇತುದಾರ ಭಾರತಿ , ಸ್ಟೈಲೋ ಡ್ಯಾನ್ಸ್ ಗ್ರೀವ್ ವಿಜಯ ಆಚಾರ್ಯ, ಶ್ರೀಶ ಆಚಾರ್ಯ, ಉಪಸ್ಥಿತರಿದ್ದರು.
ಹಾಗೂ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫೈನಲ್ ಕಂಟೆಸ್ಟೆಂಟ್ ಸಾನಿಧ್ಯ ಆಚಾರ್ಯ ಪೇರ್ಡೂರು ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ನಂತರ ಗಾನ ನಿನಾದ ಆರ್ಕೆಸ್ಟ್ರಾ ಇದರ ಕರಾವಳಿಯ ಗಾಯಕ ಗಾಯಕಿಯರಿಂದ, ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು.











