ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಇವರು ಮಣಿಪಾಲ ಸಿಗ್ಮಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಹಾಗೂ ಮಾಹೆ ಮಣಿಪಾಲ ಇವರ ಸಹಯೋಗದೊಂದಿಗೆ ಆರೋಗ್ಯ ಸುರಕ್ಷಾ ಯೋಜನೆಯ ಡಾ|ಜಿ.ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್‍ಗಳ ನವೀಕರಣ ಹಾಗೂ ಹೊಸ ಕಾರ್ಡುಗಳ ನೋಂದಾವಣೆ ನ.15ರಿಂದ ಪ್ರಾರಂಭಗೊಂಡಿದ್ದು ನ.30 ತನಕ ವಿಮಾ ಯೋಜನೆಯ ನವೀಕರಣ ಹಾಗೂ ನೋಂದಾವಣೆ ಮಾಡಿಸಬಹುದಾಗಿದೆ.
ಹೆಮ್ಮಾಡಿ ಘಟಕ ವ್ಯಾಪ್ತಿಯಲ್ಲಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಹೆಮ್ಮಾಡಿಇದರ ನೂತನ ಕಟ್ಟಡದಲ್ಲಿರುವ ಪ್ರಧಾನ ಶಾಖೆಯಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 4ರ ತನಕ ನೋಂದಾವಣೆ, ನವೀಕರಣ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಪ್ರಭಾಕರ ಸೇನಾಪುರ-9110871688, ಲೋಹಿತಾಶ್ವ ಆರ್.ಕುಂದರ್ -9611797131 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಈ ಯೋಜನೆಯಲ್ಲಿ ರೂ.50 ಸಾವಿರ ಮೌಲ್ಯದ ಆರೋಗ್ಯ ವಿಮಾ ಯೋಜನೆ ಇದಾಗಿದ್ದು, ಕಾರ್ಡುದಾರರು ಈ ವಿಮಾ ಯೋಜನೆಯಲ್ಲಿ ಒಳಪಟ್ಟ ಕಾಯಿಲೆಗೆ ಚಿಕಿತ್ಸೆ ಪಡೆಯಬಹುದಾಗಿದೆ. ಜಾತಿ ಮತ ಬೇಧವಿಲ್ಲದೆ, ಯಾವುದೇ ಷರತ್ತುಗಳಿಲ್ಲದೆ ಎಲ್ಲರಿಗೂ ಹೊಸದಾಗಿ ಕಾರ್ಡ್ ಪಡೆಯುವ ಅವಕಾಶವಿದೆ.










