ಕುಂದಾಪುರ ಮಿರರ್ ಸುದ್ದಿ…
ಕೋಟ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಗುರುವಾರ ಉಡುಪಿಯಲ್ಲಿ ಭೇಟಿಯಾಗಿ ಕೃತಕ ನೆರೆ ಸಮಸ್ಯೆಗೆ ಇತರ ಕಾರಣಗಳ ಜೊತೆ ವಾರಾಹಿ ನೀರು ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಭಾಗಕ್ಕೆ ಬಿಡುತ್ತಿರುವುದೂ ಒಂದು ಕಾರಣ ಎಂದು ಸಚಿವರಿಗೆ ಮನವರಿಕೆ ಮಾಡಿ, ಆದಷ್ಟು ಬೇಗ ಸಮಸ್ಯೆ ಪರಿಹಾರ ಮಾಡಬೇಕು ಎಂದು ರೈತಧ್ವನಿ ಸಂಘಟನೆಯು ಮನವಿ ಮಾಡಿಕೊಂಡಿತ್ತು.
ಈ ಹಿನ್ನಲ್ಲೆಯಲ್ಲಿ ತುರ್ತು ಸ್ಪಂದನೆ ನೀಡಿದ ಸಚಿವರು ವಾರಾಹಿ ಯೋಜನೆಯ ಇಂಜಿನಿಯರ್ ತಂಡವನ್ನು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಸೂಚಿಸಿದ್ದು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಇಂಜೀನಿಯರ್ ತಂಡ ರೈತ ಸಂಘಟನೆಯ ಪ್ರಮುಖರೊಂದಿಗೆ ಚರ್ಚಿಸಿದ್ದು ನಾಲ್ಕು ಸೇತುವೆಗಳ ನಿರ್ಮಾಣ ಮತ್ತು ಸೂಲಡ್ಪು-ಮಡಿವಾಳ ಸಾಲು ಹೊಳೆ ಹೂಳು ತೆಗೆಯಲು ಸೂಕ್ತ ಯೋಜನಾ ವರದಿಗೆ ರೈತ ಸಂಘಟನೆ ಪ್ರಮುಖರಲ್ಲಿ ಮಾಹಿತಿ ಕಲೆಹಾಕಿತು.
ಈ ಸಂದರ್ಭದಲ್ಲಿ ರೈತಧ್ವನಿ ಸಂಘಟನೆಯ ಅಧ್ಯಕ್ಷ ಮಣೂರು ಜಯರಾಮ ಶೆಟ್ಟಿ, ಟಿ.ಮಂಜುನಾಥ್ ಗಿಳಿಯಾರ್ ,ತಿಮ್ಮ ಕಾಂಚನ್ ಹರ್ತಟ್ಟು , ನಿತ್ಯಾನಂದ ಶೆಟ್ಟಿ,ಮಹಾಬಲ ಪೂಜಾರಿ, ಗಿಳಿಯಾರು ಪ್ರಸಾದ್ ಶೆಟ್ಟಿ, ಮಣೂರು ಮಹೇಶ್ ಶೆಟ್ಟಿ, ಹಂಡಿಕೆರೆ ರಾಘವೇಂದ್ರ ಶೆಟ್ಟಿ, ಕುಲದೀಪ ಸುಭಾಸ್ ಶೆಟ್ಟಿ,ಹರ್ತಟ್ಟು ಬಾಬು ಶೆಟ್ಟಿ,ಗಿಳಿಯಾರು ಶ್ರವಣ್ ಕುಮಾರ್ ಶೆಟ್ಟಿ, ನಾಗಾರಾಜ ಗಾಣಿಗ ಸಾಲಿಗ್ರಾಮ, ಆನಂದ ಗಿಳಿಯಾರು, ಕೀರ್ತೀಶ್ ಪೂಜಾರಿ ಮತ್ತು ಸಹಕಾರಿ ದುರೀಣ ಗಿಳಿಯಾರು ತಿಮ್ಮ ಪೂಜಾರಿ, ಉದ್ಯಮಿ ಮಹೇಶ್ ಹೆಗ್ಡೆ ಮೊಳಹಳ್ಳಿ ಹಾಜರಿದ್ದರು.











