ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಶ್ರೀ ವರಮಹಾಲಕ್ಷ್ಮೀ, ಶ್ರೀ ಮಹಿಷಾಸುರಮರ್ದಿನಿಗೆ ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದ ಹೋಮ, ಹವನಾಧಿಗಳು ಶ್ರೀ ಕ್ಷೇತ್ರದಲ್ಲಿ ನಡೆಯಿತು.
ನಂತರ ಶ್ರೀ ಮಹಿಷಾಸುರ ಮರ್ದಿನಿಗೆ ಸಾಮೂಹಿಕ ತುಪ್ಪದ ದೀಪ ಸೇವೆ ನಡೆಯಿತು. ನೂರಾರು ಭಕ್ತಾದಿಗಳು ಶ್ರೀ ದೇವಿಗೆ ತುಪ್ಪದ ದೀಪ ಬೆಳಗಿ ಪುನೀತರಾದರು.
ಪ್ರವೀಣ ಗಂಗೊಳ್ಳಿ ಸಂಪಾದಕತ್ವದ ಮಹಿಷಾಸುರಮರ್ದಿನಿ ಮಾಸ ಪತ್ರಿಕೆ ನೂತನ ಸಂಚಿಕೆಯನ್ನು ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು. ಅನ್ನದಾನ ನಿಧಿಗೆ ನೆರವು ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು. ಮಹಾ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಕಾರ್ಯದರ್ಶಿ ಪ್ರಭಾಕರ ಮೊಗವೀರ ಸೇನಾಪುರ, ಉಪಾಧ್ಯಕ್ಷರಾದ ಸದಾನಂದ ಬಳ್ಕೂರು, ನಾಗೇಶ ಬಿ ಕಾಂಚನ್, ಜಗದೀಶ ಮೇಸ್ತ್ರಿ, ಕೋಶಾಧಿಕಾರಿ ಸತೀಶ ಎಂ ನಾಯ್ಕ್, ಆಡಳಿತ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರಾದ ಎಂ.ಎಂ.ಸುವರ್ಣ, ಮೊಗವೀರ ಸ್ತ್ರೀಶಕ್ತಿ ಅಧ್ಯಕ್ಷೆ ಶ್ಯಾಮಲ ಜಿ.ಚಂದನ್, ಹಲ್ಸನಾಡು ಜಗದೀಶಯ್ಯ ಅವರ ಪತ್ನಿ ಮಕ್ಕಳು, ಮೊಗವೀರ ಯುವ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮೊಗವೀರ ಸ್ತ್ರೀ ಶಕ್ತಿಯ ಪದಾಧಿಕಾರಿಗಳು, ಗುರಿಕಾರರು ಉಪಸ್ಥಿತರಿದ್ದರು. ಗಿರೀಶ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.











