ಕುಂದಾಪುರ ಮಿರರ್ ಸುದ್ದಿ…
ಕೋಟ: ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿ ಇದೀಗ ಪದೋನ್ನತಿ ನಿಮಿತ್ತವಾಗಿ ಮೆಸ್ಕಾಂ ಕುಂದಾಪುರ ವಿಭಾಗಕ್ಕೆ ವರ್ಗಾವಣೆಗೊಂಡ ಗುರುಪ್ರಸಾದ್ ಭಟ್, ಅವರಿಗೆ ಮೆಸ್ಕಾಂ ಕೋಟ ಉಪವಿಭಾಗ ಹಾಗೂ ಕ.ವಿ.ಪ್ರ.ನಿ.ನೌಕರರ ಸಂಘ ಪ್ರಾಥಮಿಕ ಸಮಿತಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ಕೋಟದ ಮೆಸ್ಕಾಂ ಕಛೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರತಾಪ್ ಚಂದ್ರ ಶೆಟ್ಟಿ, ಸಹಾಯಕ ಇಂಜಿನಿಯರ್, ಪ್ರಶಾಂತ್ ಶೆಟ್ಟಿ,ಶಾಖಾಧಿಕಾರಿಗಳಾದ ಮಹೇಶ ಕೆ,ವೈಭವ ಶೆಟ್ಟಿ,ಸಹಾಯಕ ಲೆಕ್ಕ ಅಧಿಕಾರಿ ಸಂತೋಷ ಕುಮಾರ್ ಯು, ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ, ಕಾರ್ಯದರ್ಶಿ ಚಂದ್ರಶೇಖರ ದೇವಾಡಿಗ,ಹಾಗೂ ಮೇಲ್ವಿಚಾರಕರಾದ ಚ0ದ್ರಶೇಖರ್, ಸುಕುಮಾರ್ ಶೆಟ್ಟಿ,ಉಮೇಶ್,ನೌಕರ ಬಾಂಧವರು,ಗುತ್ತಿಗೆದಾರರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಮೇಲ್ವಿಚಾರಕರಾದ ಚಂದ್ರಶೇಖರ ಕೋಟ ನಿರ್ವಹಿಸಿದರು. ಹಾಗೂ ಪ್ರಾರ್ಥನೆಯನ್ನು ಸಿಬ್ಬಂದಿ ವಿರೇಂದ್ರವರವರು ನೆರವೆರಿಸಿದರು.











