ಕುಂದಾಪುರ ಮಿರರ್ ಸುದ್ದಿ…
ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ರಾಷ್ಠ್ರೀಯ ಶಿಕ್ಷಣ ನೀತಿ ಮತ್ತು ಪ್ರಥಮ ಪದವಿ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕಾಳಾವರ ವರದರಾಜ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರದ ಐಕ್ಯೂಎಸಿ ಸಂಚಾಲಕ ಹಾಗೂ ಇತಿಹಾಸ ವಿಭಾಗ ಮುಖ್ಯಸ್ಥರಾದ ಗಣೇಶ್ ಪೈ ಭಾಗವಹಿಸಿ ನೂತನ ರಾಷ್ಠ್ರೀಯ ಶಿಕ್ಷಣ ನೀತಿಯ ಮೂಲ ಉದ್ದೇಶ, ಮಹತ್ವ ಕುರಿತಾಗಿ ಹೇಳುತ್ತಾ, ವಿವಿಧ ಹಿನ್ನಲೆಯಿಂದ ಬಂದ ಗ್ರಾಮೀಣ ಪ್ರದೇಶದ ಪ್ರಥಮ ಪದವಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸಾಕಷ್ಟು ಗೊಂದಲಗಳಾಗುತ್ತಿರುವುದು ಸಹಜ. ಆದ್ದರಿಂದ ಸೂಕ್ತ ಮಾಹಿತಿ ಮತ್ತು ಅಭಿವಿನ್ಯಾಸ ನೀಡಿದಲ್ಲಿ ಸ್ಪಷ್ಟವಾಗುತ್ತದೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಕೌಶಲ್ಯದ ಬೆಳವಣಿಗೆಗೆ, ಐಚ್ಛಿಕ ವಿಷಯಗಳ ಜೊತೆಗೆ ಬಹುಶಿಸ್ತಿನ ಅಧ್ಯಯನಕ್ಕೂ ಮಹತ್ವ ನೀಡಿ, ಭವಿಷ್ಯದಲ್ಲಿ ಉದ್ಯೋಗ ಪಡೆಯುವಲ್ಲಿ ಸಹಕಾರಿಯಾಗಲಿದೆ. ಸ್ಮಾರ್ಟ್ ಡಿಜಿಟಲ್ ಕಲಿಕೆ ಹಾಗೂ ಆರೋಗ್ಯ ಮತ್ತು ಫಿಟ್ನೆಸ್‍ಗೂ ಮಹತ್ವ ನೀಡಲಾಗಿದೆ. ಬದಲಾದ ಸಮಾಜಕ್ಕೆ ಅನುಕೂಲಕರ ಶಿಕ್ಷಣ ನೀತಿಯಂತೆ ವಿದ್ಯಾವಂತರಾಗಿ ಸಮಾಜಕ್ಕೂ ಕುಟುಂಬಕ್ಕೂ ಸಹಕಾರಿಯಾಗುವಂತೆ, ತಮ್ಮ ವೃತ್ತಿ ಭವಿಷ್ಯದೆಡೆಗೆ ಗುರಿಯಿಟ್ಟು ಇಂದಿನ ವಿದ್ಯಾರ್ಥಿಗಳು ವಿದ್ಯಾವಂತರಾಗುವಂತೆ ಸೂಚಿಸಿದರು. ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರೋ. ನಿತ್ಯಾನಂದ ವಿ ಗಾಂವಕರ ಕಾಲೇಜಿನಲ್ಲಿ ಸಿಗುವ ಎಲ್ಲಾ ಸೌಲಭ್ಯಗಳ ಸಂಪೂರ್ಣ ಪ್ರಯೋಜನೆ ಪಡೆದು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಮಹತ್ವ ನೀಡುವ ನೂತನ ಶಿಕ್ಷಣ ನೀತಿಯ ಪ್ರಯೋಜನ ಪಡೆದುಕೊಳ್ಳುವಂತೆ ಸೂಚಿಸಿದರು.
ಐಕ್ಯೂಎಸಿ ಸಂಚಾಲಕರಾದ ರವಿಪ್ರಸಾದ್ ಕೆ.ಜಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಹಾಗೂ ಬೋಧಕ-ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಭಾಗಿಯಾದರು.











